ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 19 Oct 2013, 11:18 am

ವಾಲ್ಮೀಕಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕೊಟ್ಟೂರು: ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ವಾಲ್ಮೀಕಿ ನಾಯಕ ಬಾಂಧವರು ವಾಲ್ಮೀಕಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅ. 23ರಂದು ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಕೆಂಚಪ್ಪ ತಿಳಿಸಿದರು.
ವಿವಿಧೆಡೆ ವಾಲ್ಮೀಕಿ ಜಯಂತಿ
ಕುರುಗೋಡು: ಪಟ್ಟಣದ ವಾಲ್ಮೀಕಿ ಯುವಕ ಸಂಘದ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಶುಕ್ರವಾರ ಜರುಗಿತು. ಪ್ರಾರಂಭದಲ್ಲಿ ಕಣ್ಣಪ್ಪ ದೇವಸ್ಥಾನದಲ್ಲಿ ಸಮಾವೇಶಗೊಂಡ ಸಂಘದ ಮುಖಂಡರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನಂತರ ಮೆರವಣಿಗೆ ನಡೆಸಿದರು. ಹಗಲುವೇಷಧಾರಿ ಕುಣಿತ, ಡೊಳ್ಳು, ವಿವಿಧ ವಾದ್ಯ ಮೇಳಗಳೊಂದಿಗೆ ನಡೆದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಸಂಘದ ಅಧ್ಯಕ್ಷ ಎನ್.ಟಿ. ರಾಮಣ್ಣ, ಮುಖಂಡರಾದ ಪೊಲೀಸ್ ಯಂಕಪ್ಪ, ಮೇಲಗಿರಿ ಭೀಮಯ್ಯ, ಎನ್. ದೊಡ್ಡಬಸಪ್ಪ, ವಿ.ಎಸ್. ಶಿವಶಂಕರ್, ತಳವಾರು ಭೀಮಪ್ಪ, ಎನ್. ಶ್ರೀನಿವಾಸ್, ಕೆ. ನಾಗಪ್ಪ, ಎನ್. ಕುಮಾರಿ, ಹುಲುಗಪ್ಪ, ಹಂಪೆ ಬಸವರಾಜ್, ಎನ್. ಪ್ರಕಾಶ್, ನಾರಾಯಣಪ್ಪ, ಎರ್ರಿಸಿದ್ದಪ್ಪ, ರುದ್ರಪ್ಪ, ಹಂಬಣ್ಣ, ಹನುಮಂತ, ತಿಮ್ಮಪ್ಪ, ಟಿ. ಹಂಬಣ್ಣ, ಗೋವಿಂದ ಇದ್ದರು.
ಗ್ರಾಪಂ ಕಚೇರಿಯಲ್ಲಿ: ಪಟ್ಟಣದ ಗ್ರಾಪಂ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ಅಧ್ಯಕ್ಷೆ ಸಣ್ಣೆಮ್ಮ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಿಡಿಒ ಪ್ರಕಾಶ ಅಮರಶೆಟ್ಟಿ ಮಾತನಾಡಿದರು. ಸಿಬ್ಬಂದಿ ಕೆ. ಮಾರೇಶ್, ಹೊನ್ನೂರಸ್ವಾಮಿ ನಿರ್ವಹಿಸಿದರು. ಪಟ್ಟಣದ ನಾನಾ ಶಾಲೆ ಕಾಲೇಜು ಮತ್ತು ಸರ್ಕಾರಿ ಕಚೇರಿ, ಕಾಂಗ್ರೆಸ್ ಮತ್ತು ಗೃಹರಕ್ಷಕ ದಳದ ಕಚೇರಿ, ಸುತ್ತಮುತ್ತಲಿನ ಗೆಣೀಕಿಹಾಳ್, ಬಾದನಹಟ್ಟಿ, ವದ್ದಟ್ಟಿ, ಕ್ಯಾದಗಿಹಾಳ್, ಕೆರೆಕೆರೆ ಮತ್ತು ಎಮ್ಮಿಗನೂರು, ಗುತ್ತಿಗನೂರು, ಪಟ್ಟಣ ಸೆರಗು, ಸಿದ್ದಮ್ಮಹಳ್ಳಿ ಗ್ರಾಮದಲ್ಲಿ ಜಯಂತಿ ಆಚರಿಸಲಾಯಿತು.
ಜೂಜಾಟ: ನಾಲ್ವರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ರು. 6,770 ವಶಪಡಿಸಿಕೊಂಡಿರುವ ಘಟನೆ ಗುರುವಾರ ಕುಡಿತಿನಿ ಠಾಣಾ ವ್ಯಾಪ್ತಿಯ ದೇವಲಾಪುರದಲ್ಲಿ ನಡೆದಿದೆ. ಕುಡಿತಿನಿ ಠಾಣೆ ಪಿಎಸ್‌ಐ ವಾಸುಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು. ಈ ಕುರಿತಾಗಿ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಾಯಣದಲ್ಲಿ ಸಹೋದರತೆ, ಮಾನವೀಯತೆ, ಸಹಕಾರ, ಪಾವಿತ್ರ್ಯ ಮೇಳೈಸಿದೆ. ಮಾನವೀಯ ಮೌಲ್ಯಗಳ ಸಂಗಮ ರಾಮಾಯಣದಲ್ಲಿದ್ದು, ಇದರ ಸಾರದಿಂದ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆಯಿಂದ ನಡೆದಾಗ ಮಾತ್ರ ಮಹಾತ್ಮರ ಸ್ಮರಣೆ ಸಾರ್ಥಕ.
- ಡಾ. ಟಿ. ಕೊತ್ಲಮ್ಮ, ಸರ್ಕಾರಿ ಪಪೂ ಕಾಲೇಜು ಉಪ ಪ್ರಾಚಾರ್ಯೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement