ವಿವಿಧೆಡೆ ವಾಲ್ಮೀಕಿ ಜಯಂತಿ, ಭಾವಚಿತ್ರಕ್ಕೆ ಪೂಜೆ
ಬಳ್ಳಾರಿ: ನಗರ ಸೇರಿದಂತೆ ಜಿಲ್ಲಾದ್ಯಂತ ವಾಲ್ಮೀಕಿ ಜಯಂತಿಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಲಾಯಿತು.
ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿ ನೇತಾಜಿ ಯುವಕ ಸಂಘದಿಂದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಗ್ರಾಮದ ಗಣ್ಯರು ಮಹರ್ಷಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಕಟ್ಟೇಬಸಪ್ಪ, ಹನುಮಂತ, ಸಂಘದ ಅಧ್ಯಕ್ಷ ಕೆ. ವೆಂಕಟೇಶ್, ಕೃಷ್ಣಮೂರ್ತಿ, ಶ್ರೀನಿವಾಸ, ಕಾವಲಿ ಬಸವರಾಜ್, ನಟರಾಜ್, ಲೋಕೇಶ್, ಹೊನ್ನೂರಸ್ವಾಮಿ ಇದ್ದರು.
ಇಲ್ಲಿನ ಗಾಂಧಿನಗರದಲ್ಲಿನ ಜೈಕನ್ನಡ ರಕ್ಷಣಾ ವೇದಿಕೆಯ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ರಾಜ್ಯಾಧ್ಯಕ್ಷ ಜಾನಕಿರಾಮ್ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಘದ ಪಿ.ಎಂ. ಈಶ್ವರಪ್ಪ, ಕೆ. ಶ್ಯಾಮಸುಂದರ್ ಮಾಲಾರ್ಪಣೆ ಮಾಡಿದರು. ಸಂಘದ ಸುರೇಶ್ ನಾಯ್ಕ್, ನಾಗರಾಜ್, ಲಕ್ಷ್ಮಣ ನಾಯ್ಕ್, ಪಂಪನಗೌಡ, ಆನಂದ್, ಎಂ. ಸುರೇಶ್, ಮಹಾಂತೇಶ್ಗೌಡ, ಜಿ.ಎಂ. ಪ್ರದೀಪ್ ಇತರರಿದ್ದರು.
ನಗರದ ಹೀರದ ಸೂಗಮ್ಮ ಹಿ.ಪ್ರಾ. ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಶುಕ್ರವಾರ ಆಚರಿಸಲಾಯಿತು. ಶಾಲಾಡಳಿತ ಮಂಡಳಿಯ ಸದಸ್ಯ ಮಹಾನಂದಿ ಬಸವಲಿಂಗಪ್ಪ ಹಾಗೂ ಮುಖ್ಯಗುರು ಚಾ.ಮ. ಗಂಗಾಧರಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ಆರ್ ತಾರಾನಾಥ್ ನಿರೂಪಿಸಿ, ವಂದಿಸಿದರು.
ಕಪ್ಪಗಲ್ಲು ಗ್ರಾಮ: ತಾಲೂಕಿನ ಕಪ್ಪಗಲ್ಲು ಗ್ರಾಮದ ಕನ್ನಡ ರಕ್ಷಣಾ ಯುವ ವೇದಿಕೆಯಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ಕಪ್ಪಗಲ್ಲು ಮುನಿಸ್ವಾಮಿ ಶ್ರೀಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಜುನಾಥಸ್ವಾಮಿ, ಕೋರಿಬಸವ, ಶಿವಪ್ಪ, ಬಿ.ತಿಪ್ಪೇಸ್ವಾಮಿ, ಟಿ. ಚೆನ್ನಬಸವನಗೌಡ ಮೊದಲಾದವರು ಇದ್ದರು.