ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 20 Oct 2013, 1:03 am

ನಾಳೆ ಎನ್ನೆಸ್ಸೆಸ್ ಶಿಬಿರ
ಕೊಟ್ಟೂರು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು  ಸಮೀಪದ ಚಪ್ಪರದಹಳ್ಳಿಯಲ್ಲಿ ಅ. 21ರಿಂದ 26ರ ವರೆಗೆ ಹಮ್ಮಿಕೊಂಡಿದೆ. ಆರೋಗ್ಯ ತಪಾಸಣೆ, ಜಾನುವಾರುಗಳ ತಪಾಸಣಾ, ಪವಾಡ ರಹಸ್ಯ ಬಯಲು ಕಾರ್ಯಕ್ರಮ ಮತ್ತು ಅಗ್ನಿ ದುರಂತದ ಪ್ರಾತ್ಯಕ್ಷಿತೆಯಂತಹ ಶಿಬಿರಗಳನ್ನು ನಡೆಸುವ ಮೂಲಕ ಗ್ರಾಮಸ್ಥರಿಗೆ ನೆರವಾಗುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶಿಬಿರಾಧಿಕಾರಿ, ಉಪನ್ಯಾಸಕ ಡಾ.ಜಿ. ಸೋಮಶೇಖರ್ ತಿಳಿಸಿದರು. ವಿಶೇಷ ವಾರ್ಷಿಕ ಶಿಬಿರದ ಕಾರ್ಯಕ್ರಮಕ್ಕೆಂದೆ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ವಿ.ಕೃ. ಗೋಕಾಕ್, ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ ವೇದಿಕೆಗಳನ್ನು ಚಪ್ಪರದಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುವುದು. ಉದ್ಘಾಟನಾ ಸಮಾರಂಭ ಅ. 21ರ ಸೋಮವಾರ ನಡೆಯಲಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಉದ್ಘಾಟಿಸುವರು. ಶಿಬಿರದ ಧ್ವಜಾರೋಹಣವನ್ನು ಎಂ.ಎಂ.ಜೆ. ಹರ್ಷವರ್ಧನ್ ನೆರವೇರಿಸಿದರೆ, ಪ್ರತಿಜ್ಞಾವಿಧಿಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ಎನ್. ಕೊಟ್ರೇಶ್ ಬೋಧಿಸುತ್ತಾರೆ. ಅ. 22ರ ಮಂಗಳವಾರ ಉಪನ್ಯಾಸಕ ಬಿ. ಗೋವಿಂದಪ್ಪ, ಯು. ಮಲ್ಲಿಕಾರ್ಜುನಸ್ವಾಮಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸುವರು. ಅ. 23ರ ಬುಧವಾರ ವೈದ್ಯರಾದ ಡಾ. ವೀರೇಶ್, ಡಾ.ಬಿ.ಎಂ. ಪವಿತ್ರಾ, ಡಾ. ಡಂಬಳ ಮಲ್ಲಿನಾಥ, ಡಾ.ಎ.ಎಂ. ನಿರಂಜನ, ಡಾ. ರವಿ, ಡಾ. ವಿಶ್ವನಾಥ, ಆರೋಗ್ಯ ತಪಾಸಣೆ ನಡೆಸುತ್ತಾರೆ. ಅ. 24ರಂದು ಅಗ್ನಿ ದುರಂತ ಪ್ರಾತಿಕ್ಷಿತೆಯನ್ನು ಕೊಟ್ಟೂರು ಅಗ್ನಿ ಶಾಮಕ ಠಾಣಾಧಿಕಾರಿ ಕೆ.ಎಂ. ಸಿದ್ದೇಶ್ವರ ನೆರವೇರಿಸುತ್ತಾರೆ ಎಂದು ತಿಳಿಸಿದ ಅವರು, ಚಪ್ಪರದಹಳ್ಳಿ ಗ್ರಾಮದಲ್ಲಿ ಶಿಬಿರದ ಅಂಗವಾಗಿ ಚರಂಡಿ ನಿರ್ಮಾಣ, ದುರಸ್ತಿ ಮತ್ತು ಬೀದಿ ಸ್ವಚ್ಛತೆ, ಸಸಿ ನೆಡುವುದು. ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಕಾರ್ಯಕ್ರಮದ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವತ್ತ ಮುಂದಾಗುವುದಾಗಿ ತಿಳಿಸಿದರು.
ನಾಳೆ ವಿಶೇಷ ಉಪನ್ಯಾಸ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದಿಂದ ವಾಲ್ಮೀಕಿ ಜಯಂತಿ ಅಂಗವಾಗಿ ಹಂಪಿ ವಿವಿಯ ಭುವನವಿಜಯದಲ್ಲಿ ಅ. 21ರಂದು ಬೆಳಗ್ಗೆ 11ಕ್ಕೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಹಾರೋಹಳ್ಳಿಯ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ವಾಲ್ಮೀಕಿ ವಿಚಾರಧಾರೆ ಕುರಿತು ಮಾತನಾಡುವರು. ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಹನೂರು ಮ್ಯಾಸಬೇಡರ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಮಾತನಾಡುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹಾಗೂ ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಸಭೆಯಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಾಲ್ಮೀಕಿ ಜಯಂತಿ: ಮೆರವಣಿಗೆ

ಹೊಸಪೇಟೆ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮರಿಯಮ್ಮನಹಳ್ಳಿ ಘಟಕದಿಂದ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಬೆಳಗ್ಗೆ 10 ಗಂಟೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಸ್ಥಳೀಯ ಗ್ರಾಪಂ ಕಚೇರಿ ಮುಂಭಾಗದಿಂದ ಆರಂಭಗೊಂಡು ಗ್ರಾಮದ ಮುಖ್ಯ ರಸ್ತೆಯಲ್ಲಿ ತೆರಳಿ ವಾಲ್ಮೀಕಿ ಸಮುದಾಯ ಭವನದ ಬಳಿ ಅಂತ್ಯಗೊಂಡಿತು. ತಾಸೆ ವಾದನ, ನಂದಿಕೋಲು ಕುಣಿತ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ಇತರೆ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವಾದ್ಯಗಳ ತಾಳಕ್ಕೆ ತಕ್ಕಂತೆ ಯುವಕರು ಕುಣಿದು ಸಂಭ್ರಮಿಸಿದರು.
ಮರಿಯಮ್ಮನಹಳ್ಳಿ ಘಟಕದ ಮಹಾಸಭಾ ಅಧ್ಯಕ್ಷ ತಳವಾರ ಹುಲುಗಪ್ಪ, ಉಪಾಧ್ಯಕ್ಷ ಆರ್. ಮಂಜುನಾಥ, ಕಾರ್ಯದರ್ಶಿ ಶಿಕ್ಷಕ ಮಂಜುನಾಥ, ಸಹ ಕಾರ್ಯದರ್ಶಿ ತಳವಾರ ಬಸವರಾಜ, ಖಜಾಂಚಿ ಎನ್. ಸತ್ಯನಾರಾಯಣ, ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ, ಮುಖಂಡರಾದ ಕಚಟಿ ಸೋಮಣ್ಣ, ಎಪಿಎಂಸಿ ಸದಸ್ಯ ತಳವಾರ ಸೋಮಶೇಖರ್, ಮರಡಿ ಹನುಮಂತ, ಕೊಟ್ಗಿ ನಾಗಪ್ಪ, ಉದ್ದೇಕಲ್ ವೆಂಕಟೇಶ್, ತಳವಾರ ರಾಮಣ್ಣ, ಬಿ. ರಾಮಣ್ಣ, ಬಿ. ತಾಯಪ್ಪ, ಅಂಜಿನಪ್ಪ, ಪ್ರಮೋದ್ ವಾಲ್ಮೀಕಿ, ಕಲ್ಲಾಳ್  ಪರಶುರಾಮಪ್ಪ, ದ್ಯಾಮಪ್ಪ ವಾಲ್ಮೀಕಿ, ಮ್ಯಾದಾರ್ ಚಂದ್ರಪ್ಪ, ಬಾಣದ ಯಮನೂರ, ನಾರಾಯಣಪ್ಪ, ಬ್ರೆಡ್ ರಾಮಣ್ಣ, ಹನುಮಂತ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement