ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರ, ಕ್ರಿಶ್ಚಿಯನ್ ಸಮುದಾಯದ ಯುವಕ, ಯುವತಿಯರಿಗೆ ಕಂಪ್ಯೂಟರ್ ತರಬೇತಿ ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ ಹೊಂದಿದ 18ರಿಂದ 35 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಇನ್ ಫೈನಾನ್ಶಿಯಲ್ ಅಕೌಂಟಿಂಗ್ ಮ್ಯಾನೇಜ್ಮೆಂಟ್ ವಿತ್ ಆಫೀಸ್ ಆಟೋಮೇಷನ್, ಡಿಪ್ಲೊಮಾ ಇನ್ ಕಂಪ್ಯೂಟರ್ ಟೀಚರ್ಸ್ ಟ್ರೈನಿಂಗ್, ಅಡ್ವಾನ್ಸ್ ಡಿಪ್ಲೊಮಾ ಇನ್ ಸಾಫ್ಟ್ವೇರ್ ಟೆಕ್ನಾಲಜಿ ಹಾಗೂ ಡಿಪ್ಲೊಮಾ ಇನ್ ಪಿಸಿ ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್ ಕೋರ್ಸ್ಗಳಲ್ಲಿ ಕಂಪ್ಯೂಟರ್ ತರಬೇತಿ ನೀಡಲಾಗುವುದು. ವಾರ್ಷಿಕ ರು. 2 ಲಕ್ಷ ಆದಾಯ ಒಳಗಿರಬೇಕು. ಆಸಕ್ತರು ಕಚೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣಪತ್ರ, ಹಿಂದೆ ಪಾಸಾದ ಅಂಕಪಟ್ಟಿ ಲಗತ್ತಿಸಿ ಅ. 31ರೊಳಗೆ ಬಿಸಿಎಂ ಕಚೇರಿಗೆ ಸಲ್ಲಿಸಬೇಕು ಎಂದು ರಾಚಯ್ಯ ತಿಳಿಸಿದ್ದಾರೆ.