ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದ್ವೇಷಾಸೂಯೆಯಿಂದ ಸಮಾಜ ಅಭಿವೃದ್ಧಿ ಅಸಾಧ್ಯ

Mainashree
Updated On : 21 Oct 2013, 10:28 am

ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಅ. 20
ಸಮಾನತೆಯ ಮಹತ್ವ ಸಾರಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರ ಸನ್ಮಾರ್ಗದಲ್ಲಿ ನಡೆದಿರುವವರು ಬಣಜಿಗ ಸಮುದಾಯದವರು ಎಂದು ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ತಿಳಿಸಿದರು.
ಪಟ್ಟಣದ ಅಮೃತೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ತಾಲೂಕು ಬಣಜಿಗ ಸಮುದಾಯದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಯಾವ ಸಮಾಜದಲ್ಲಿ ದ್ವೇಷ, ಅಸೂಯೆ ಮನೋಭಾವನೆಗಳು ಇರುತ್ತವೆಯೋ ಅಂತಹ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಒಳಪಂಗಡಗಳು ಕೇವಲ ಸಾಮಾಜಿಕ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿರಬೇಕೇ ಹೊರತು ಲಿಂಗಾಯಿತ ಸಮಾಜದಲ್ಲಿ ಬೇರೆ ಅರ್ಥಗಳನ್ನು ಉಂಟುಮಾಡಬಾರದು ಎಂದು ಹೇಳಿದರು.
ಪ್ರಧಾನಿಗೆ ಮನವಿ: ಶಾಸಕ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಲಿಂಗಾಯಿತ ಸಮುದಾಯವನ್ನು ಪ್ರತ್ಯೇಕ ಧರ್ಮವನ್ನಾಗಿಸಲು ಹೋರಾಟ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಧಾನಿ, ಇತರರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಎಲ್ಲರೂ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಲಿಂಗಾಯಿತ ಸಮುದಾಯವನ್ನು ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕವಾಗಿ ಬೆಳಸುವ ನಿಟ್ಟಿನಲ್ಲಿ ವೀರಶೈವ ಲಿಂಗಾಯಿತ ಸಮುದಾಯದಡಿ ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಮಾತನಾಡಿ, ಸಮಾಜವನ್ನು ಮುನ್ನಡೆಸಲು ಬಣಜಿಗ ಸಮಾಜದ ಧಾರ್ಮಿಕವಾಗಿ, ರಾಜಕೀಯವಾಗಿ ಹತ್ತು ಹಲವು ಮಹಾನ್ ಪುರುಷರನ್ನು ನೀಡಿದ ಕೀರ್ತಿ ಸಮಾಜಕ್ಕೆ ಇದೆ ಎಂದರು.
ಕೊಪ್ಪಳ ಸಂಸದ ಶಿವರಾಮಗೌಡ, ಶಾಸಕರಾದ ಬಿ.ಎಂ. ನಾಗರಾಜ, ಗುರುಪಾಟೀಲ್, ಮಾಜಿ ಶಾಸಕ ಪರಣ್ಣ ಮನವಳ್ಳಿ, ಬಣಜಿಗ ಬಂಧು ಮಾಸ ಪತ್ರಿಕೆ ಸಂಪಾದಕ ಎಂ.ವಿ. ಗೊಂಗಡಶೆಟ್ಟಿ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮಕ್ಕ ಅಂಗಡಿ, ತಾಲೂಕು ಅಧ್ಯಕ್ಷ ಎಸ್.ವಿ. ವೀರೇಶಬಾಬು, ಸಂಘದ ಪ್ರಧಾನ ಕಾರ್ಯದರ್ಶಿ ಮೃತುಂಜಯಪ್ಪ ಇತರರು ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಅಂದಪ್ಪ ಗುಂಡಳ್ಳಿ, ಎಂ.ವಿ. ಗೊಂಗಡಶೆಟ್ಟಿ, ಸಂಘದ ಗೌರವಾಧ್ಯಕ್ಷ ಕರಣಂ ಸಿದ್ದನಗೌಡ, ಎನ್.ಜಿ. ಬಸವರಾಜಪ್ಪ, ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಎಂ.ಜಿ. ಶರಣಮ್ಮಕ್ಕ, ಯು. ಅಮರೇಶಪ್ಪ, ಆರ್.ಬಸವಲಿಂಗಪ್ಪ, ಜಿ. ರಾಮಲಿಂಗಪ್ಪ, ಯೋಗಿರಾಜ, ಸಾಹುಕಾರ ಸತೀಶಬಾಬು, ಬಸವರಾಜ, ಜಡೆ ರುದ್ರಪ್ಪ, ಚಿತ್ತರಗಿ ಮೃತ್ಯುಂಜಯ, ಜಯದೇವ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆದೋನಿ ರಸ್ತೆಯ ನಾಗಲಿಂಗೇಶ್ವರ ದೇವಸ್ಥಾನದಿಂದ ಬಸವೇಶ್ವರ ಭಾವಚಿತ್ರ, ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ತಾಲೂಕಿನ ಅಮೃತೇಶ್ವರ ದೇವಸ್ಥಾನದ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಹಾಗೂ ತಾಲೂಕಿನ ಸುತ್ತಮುತ್ತಲಿಂದ ಆಗಮಿಸಿದ ಬಣಜಿಗ ಬಂಧುಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement