ಯುವಜನ ಜಾಗೃತಿ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಅಖಿಲ ಕರ್ನಾಟಕ ಯುವಜನ ಜಾಗೃತಿ ವೇದಿಕೆಯ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಗರದ ವುಂಕಿ ಮರಿಸಿದ್ದಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ವೇದಿಕೆಯ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ಸಿದ್ದರಾಮಪ್ಪ ಸಿರಿಗೇರಿ, ಜಿಲ್ಲಾಧ್ಯಕ್ಷ ಜಿ. ರಾಮನಗೌಡ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದುರ. ಜಿಲ್ಲಾ ಗೌರವಾಧ್ಯಕ್ಷರಾಗಿ ಹರಗಿನಡೋಣಿ ದೊಡ್ಡಬಸವನಗೌಡ, ಉಪಾಧ್ಯಕ್ಷ ಬಿಡಿಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ರತ್ನಯ್ಯ, ಜಂಟಿ ಕಾರ್ಯದರ್ಶಿ ಚಿಕ್ಕಗಾದಿಲಿಂಗಪ್ಪ, ಸಂಘಟನಾ ಕಾರ್ಯದರ್ಶಿ ಜಾಲಿಹಾಳ ಹೊನ್ನೂರಪ್ಪ, ಸಿರುಗುಪ್ಪ- ಬಳ್ಳಾರಿ ತಾಲೂಕು ಅಧ್ಯಕ್ಷ ಮಸೀದಿಪುರ ಜಿ.ಎಂ. ಘನಮಲ್ಲಿ ಹಾಗೂ ಇತರರು ಆಯ್ಕೆಯಾದರು.