ಬೆಟ್ಟಿಂಗ್: ಮೂವರ ಬಂಧನ
ಬಳ್ಳಾರಿ: ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್ ಕುರಿತಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ, 3 ಆರೋಪಿಗಳನ್ನು ಬಂಧಿಸಿ, ರು. 42 ಸಾವಿರ ಹಾಗೂ 8 ಮೊಬೈಲ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಕುಡಿತಿನಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುಡಿತಿನಿ ಠಾಣೆಯ ಪಿಎಸ್ಐ ವಾಸುಕುಮಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿ, ಶಂಕರಗೌಡ, ಪಂಪನಗೌಡ, ರಾಜೇಶ್ ಎನ್ನುವವರನ್ನು ಬಂಧಿಸಿ, ಅವರಿಂದ ರು. 42 ಸಾವಿರ ಹಾಗೂ 8 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ಕುರಿತಾಗಿ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.