ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿವಹಿಸಿ

Lingaraj Badiger
Updated On : 23 Oct 2013, 10:51 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 22
ಪ್ರೌಢಶಾಲಾ ಮಟ್ಟಕ್ಕೆ ಕ್ರೀಡಾಸಕ್ತಿಯನ್ನು ಸೀಮಿತಗೊಳಿಸದೆ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಟಿ. ಸುರೇಶ್ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಅವರು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳು ಕ್ರೀಡಾಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಕಾಲೇಜು ಇಂತಹ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ. ಇಂತಹ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕೊಟ್ಟೂರು ಕಾಲೇಜು ಚಾಂಪಿಯನ್: ಸಂಜೆ ಜರುಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರುಕ್ಮಿಣಮ್ಮ ಕಾಲೇಜು ಪ್ರಾಚಾರ್ಯ ಬಿ. ಪ್ರಕಾಶ್ ಅವರು ವಿಜೇತರಿಗೆ ಟ್ರೂಫಿ ಹಾಗೂ ಪ್ರಶಸ್ತಿಯನ್ನು ವಿತರಿಸಿದರು. ಅಂತರ್ ಕಾಲೇಜು ಮಟ್ಟದ ಖೋ ಖೋ ಪಂದ್ಯಾವಳಿಯ ಫೈನಲ್ ಪಂದ್ಯದ ಮಹಿಳಾ ವಿಭಾಗದಲ್ಲಿ ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಹಾಗೂ ಪುರುಷ ವಿಭಾಗದಲ್ಲಿ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಕೊಟ್ಟೂರೇಶ್ವರ ಪ್ರಥಮ ದರ್ಜೆ ಕಾಲೇಜು ತಂಡ ಗೆಲವು ಸಾಧಿಸಿದವು.
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳ ನಡುವೆ ಸ್ಪರ್ಧೆ ನಡೆಯಿತು. ಅಂತಿಮವಾಗಿ ಕುರುಗೋಡು ಕಾಲೇಜು ಮಹಿಳಾ ತಂಡ 9-4 ಅಂತರದಲ್ಲಿ ಗೆಲವು ದಾಖಲಿಸಿತು. ಅತ್ತ ಪುರುಷರ ವಿಭಾಗದಲ್ಲಿ ಸರಳಾದೇವಿ ಕಾಲೇಜು ತಂಡವನ್ನು ಕೊಟ್ಟೂರು ಕಾಲೇಜು ತಂಡ 13-09 ಅಂತರದಲ್ಲಿ ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡವು.
11 ತಂಡಗಳು ಭಾಗಿ: ಪಂದ್ಯಾವಳಿಯಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜು, ಹರ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಡೂರಿನ ಜಿಎಫ್‌ಜಿ, ಗಂಗಾವತಿಯ ಎಸ್‌ಕೆಎನ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಒಟ್ಟು 11 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಸಂಡೂರು ಕಾಲೇಜಿನ ಪ್ರಾಚಾರ್ಯ ಪ್ರೊ. ನಾರಾಯಣಪ್ಪ, ಕುರುಗೋಡು ಕಾಲೇಜಿನ ಪ್ರೊ. ಜಿ.ಆರ್. ವೆಂಕಟೇಶ್, ವಾಣಿಜ್ಯ ವಿಭಾಗದ ಹಿರಿಯ ಉಪನ್ಯಾಸಕ ಡಾ. ಪಿ. ರಾಧಾಕೃಷ್ಣ, ಕೃಷ್ಟಪ್ಪ, ಶಶಿಕಾಂತ, ಡಾ. ಕೆ. ಬಸಪ್ಪ, ಡಾ. ಶ್ಯಾಮಮೂರ್ತಿ, ಮುರಳೀಕೃಷ್ಣ, ದೈಹಿಕ ಶಿಕ್ಷಣ ಬೋಧಕ ಮುತ್ತೇಗೌಡ, ಕ್ರೀಡಾ ಕಾರ್ಯಕ್ರಮ ಅಧಿಕಾರಿ ಎಂ. ಸೋಮಶೇಖರ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement