ಶಿಷ್ಟಾಚಾರ ಉಲ್ಲಂಘನೆ: ಪ್ರತಿಭಟನೆ
ಹಗರಿಬೊಮ್ಮನಹಳ್ಳಿ: ಶಾಸಕ ಎಸ್. ಭೀಮಾನಾಯ್ಕ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಪಕ್ಷದ ಹಿರಿಯ ಮುಖಂಡ ಹೆಗ್ಡಾಳ ರಾಮಣ್ಣ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳನ್ನು ಕಡೆಗಣಿಸಿ, ಸರ್ಕಾರಿ ಸಭೆ, ಸಮಾರಂಭಗಳಲ್ಲಿ ತಮ್ಮ ಹಿಂಬಾಲಕರಿಗೆ ವೇದಿಕೆಯಲ್ಲಿ ಸ್ಥಾನ ಕಲ್ಪಿಸಿಕೊಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಶಾಸಕರ ಈ ನಡವಳಿಕೆ ಸಂವಿಧಾನ ಬಾಹಿರ ಎಂದು ಆರೋಪಿಸಿದರು.
ಶಿಷ್ಟಾಚಾರ ಉಲ್ಲಂಘನೆ ಜೊತೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಗ್ರಾಪಂ, ತಾಪಂ ಹಾಗೂ ಜಿಪಂ ಸದಸ್ಯರ ಅನುದಾನದಲ್ಲಿ ಶಾಸಕರ ಅನಗತ್ಯ ಹಸ್ತಕ್ಷೇಪ ಕೂಡಲೇ ನಿಲ್ಲಬೇಕೆಂದು ಆಗ್ರಹಿಸಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಬೇಕಾದರೆ ನಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿ ಎಂದು ವ್ಯಂಗ್ಯವಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಮುಖಂಡ ಪಿ. ಛತ್ರಪ್ಪ, ಚಿಂತ್ರಪಳ್ಳಿ ರೇಣುಕಮ್ಮ, ಕೃಷ್ಣನಾಯ್ಕ, ಬುಡ್ಡಿ ಬಸವರಾಜ, ಎಪಿಎಂಸಿ ಸದಸ್ಯ ಅಂಬಾಡಿ ನಾಗರಾಜ, ಎಚ್.ಎ. ಕೊಟ್ರೇಶ್, ತಾಪಂ ಸದಸ್ಯರಾದ ಎಂ.ಎಂ. ಶಿವಕುಮಾರ, ಬಾಲಕೃಷ್ಣಬಾಬು, ಗ್ರಾಪಂ ಸದಸ್ಯರಾದ ಎಣ್ಣಿ ಬಾಷಾ, ಹನುಮಜ್ಜ, ಲಡನಕಬಾವಿ ಶ್ರೀನಿವಾಸ, ಕೃಷ್ಣಾಪುರ ನಾಗರಾಜ, ಮಾಲ್ವಿ ಚನ್ನಬಸಪ್ಪ, ಶಬೀರ್, ಯಡ್ರಮ್ಮನಹಳ್ಳಿ ಮರಿಯಪ್ಪ, ಸಿ. ಬಸವರಾಜ, ಚಿನ್ನಾಪುರೆಪ್ಪ, ಎಚ್.ಎಂ. ನಾಗರಾಜ, ಎನ್.ಜೆ. ರಾಜಣ್ಣ, ಪೂರ್ಯನಾಯ್ಕ, ವೆಂಕಟೇಶ ಮತ್ತಿತರರು ಭಾಗವಹಿಸಿದ್ದರು.