ಸೌಜನ್ಯಾ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 22
ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲೂಕು ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿ ಸೌಜನ್ಯಾ ಮೇಲೆ ನಡೆದ ಅಮಾನುಷ ಅತ್ಯಾಚಾರ ಮತ್ತು ಕೊಲೆ ಮಾಡಿ ಸುಮಾರು ಒಂದು ವರ್ಷ ಗತಿಸಿದರೂ ಅಪರಾಧಿಗಳಿಗೆ ಇದುವರೆಗೂ ಶಿಕ್ಷೆಯಾಗಿಲ್ಲ. ಕೊಲೆ ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದರಿಂದ ಆಮೆಗತಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಮಂದಗತಿ ಈ ತನಿಖೆಯನ್ನು ನೋಡಿದರೆ ಇದರಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಈ ಪ್ರಕರಣವನ್ನು ಸಿಐಡಿ ತನಿಖೆಯಲ್ಲಿ ನಂಬಿಕೆಯಿಲ್ಲದ ಕಾರಣ ತಕ್ಷಣವೇ ಸಿಬಿಐ ತನಿಖೆಗೊಪ್ಪಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಎಸ್‌ಎಫ್‌ಐನ ತಾಲೂಕಾಧ್ಯಕ್ಷ ಟಿ. ಶರತ್‌ಕುಮಾರ್, ಕಾರ್ಯದರ್ಶಿ ವೈ. ಪಂಪಾನಂದ, ಸಹ ಕಾರ್ಯದರ್ಶಿ ವಸಂತ್ ಕಲಾಲ್, ಮುಖಂಡರಾದ ಹುಲುಗಪ್ಪ, ಖಾದರ್ ಭಾಷಾ, ಪ್ರೇಮ್, ವಿದ್ಯಾರ್ಥಿನಿಯರ ಉಪಸಮಿತಿಯ ರಾಜ್ಯ ಸಮಿತಿ ಸದಸ್ಯೆ ಎಸ್.ವಿ. ವಿಜಯಲಕ್ಷಿ, ತಾಲೂಕು ಸಮಿತಿ ಸಹ ಸಂಚಾಲಕಿ ತಾಯಶ್ರೀ, ಉಮಾದೇವಿ, ಮಾಲಾ, ಅರುಣ, ಶೃತಿ, ಶ್ವೇತ, ಭುವನ, ಮೇಘಾ ಮುಂತಾದವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.