ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹದವಾಗಿ ಸುರಿದ ಹಿಂಗಾರು ಮಳೆ: ರೈತರಲ್ಲಿ ಹರ್ಷ

Lingaraj Badiger
Updated On : 23 Oct 2013, 10:59 am

ಬಳ್ಳಾರಿ: ಜಿಲ್ಲೆಯ ಕೆಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಮಂಗಳವಾರ ಬೆಳಗ್ಗೆ ಜಿಲ್ಲೆಯ ಕೆಲವೆಡೆಗಳಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಜಿಲ್ಲೆಯ ಕೂಡ್ಲಿಗಿ, ಸಂಡೂರು, ಬಳ್ಳಾರಿ ತಾಲೂಕಿನಲ್ಲಿ ಮಳೆಯಾಗಿದ್ದು, ಉತ್ತಮ ಮಳೆಯ ಕಾರಣ, ಮಳೆ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಹರ್ಷ ಮೂಡಿದೆ.
ಬಳ್ಳಾರಿ ತಾಲೂಕಿನಲ್ಲಿ 8.2 ಮಿ.ಮೀ., ಕೂಡ್ಲಿಗಿ 7.2 ಮಿ.ಮೀ., ಹೊಸಪೇಟೆ ತಾಲೂಕಿನಲ್ಲಿ 5.2., ಸಿರುಗುಪ್ಪ 15.2 ಮಿ.ಮೀ., ಸಂಡೂರಿನಲ್ಲಿ 13.2 ಮಿ.ಮೀ. ಮಳೆಯಾಗಿದೆ. ಮಂಗಳವಾರ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಹಾನಿಯಾಗಿಲ್ಲ.
ಮಳೆಯಿಂದಾಗಿ ಬಿಸಿಲು ನಾಡು ತಂಪಾಗಿದೆ. ಇನ್ನು ಮಳೆಯಾಗಿರುವ ತಾಲೂಕುಗಳಲ್ಲಿ ಬಿತ್ತನೆ ಮಾಡಿರುವ ಕಡಲೆ, ಹತ್ತಿ ಸೇರಿದಂತೆ ಇತರೆ ಬೆಳೆಬಿತ್ತನೆ ಮಾಡಿರುವ ರೈತರ ಮೊಗದಲ್ಲಿ ಸಂತಸ ಮೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement