ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ಸಾಂಸ್ಕೃತಿಕ ಸೌರಭ

Lingaraj Badiger
Updated On : 24 Oct 2013, 10:54 am

ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ. 25ರಂದು ಸಂಜೆ 6.30ಕ್ಕೆ ನಗರದ ಹೊಸಪೇಟೆ ರಿಂಗ್ ರಸ್ತೆಯಲ್ಲಿರುವ ಬಲಿಜ ಭವನದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್. ಶಂಕರನಾಯುಡು ಮತ್ತು ಸಂಗಡಿಗರಿಂದ 'ನೀವು ನಕ್ಕರೆ ಹಾಲು ಸಕ್ಕರೆ' ಎನ್ನುವ ಹಾಸ್ಯ ನಾಟಕ ಹಾಗೂ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮದಡಿ ಜಾನಪದ ಸಮೂಹ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ.ಸಿ. ಸುಂಕಣ್ಣ ತಂಡದವರು ಜಾನಪದ ಸಮೂಹ ನೃತ್ಯ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿವೃತ್ತ ನೌಕರರ ಸಂಘಕ್ಕೆ ಚುನಾವಣೆ
ಬಳ್ಳಾರಿ: ಬಳ್ಳಾರಿ ಜಿಲ್ಲಾ ನಿವೃತ್ತ ನೌಕರರ ಸಂಘಕ್ಕೆ ಡಿ. 19ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ನಗರದ ಗಾಂಧಿಭವನದಲ್ಲಿ ಚುನಾವಣೆ ನಡೆಯಲಿದೆ. ಸಂಘದ ಜಿಲ್ಲಾ ಘಟಕದ ಆಜೀವ ಸದಸ್ಯರು ಆಡಳಿತ ಮಂಡಳಿಗೆ 15 ಸದಸ್ಯರನ್ನು ಚುನಾಯಿಸಬಹುದಾಗಿದೆ. ಆಸಕ್ತಿಯುಳ್ಳ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅರ್ಜಿ ಸಲ್ಲಿಸುವ, ಹಿಂಪಡೆಯುವ ಕುರಿತಂತೆ, ಮಾಹಿತಿಗಾಗಿ ಸಂಘದ ಕೆಲಸದ ವೇಳೆ ಬೆಳಗ್ಗೆ 10ರಿಂದ 1 ಗಂಟೆಯ ಒಳಗೆ ದೂ.ಸಂ. 274187 ಅಥವಾ ಅಧ್ಯಕ್ಷರ ಮೊ.ಸಂ. 9481585095ಗೆ ಸಂಪರ್ಕಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಎಂ. ಸಣ್ಣಬಸಯ್ಯ ತಿಳಿಸಿದ್ದಾರೆ.
ಅಂದರ್ ಬಹಾರ್: ಬಂಧನ
ಸಂಡೂರು: ಅಂದರ್ ಬಹಾರ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿ ರು. 8,325 ವಶಪಡಿಸಿಕೊಂಡಿರುವ ಘಟನೆ ಸಂಡೂರಿನ ಭುಜಂಗ ನಗರದಲ್ಲಿ ನಡೆದಿದೆ. ಭುಜಂಗ ನಗರದ 2ನೇ ವಾರ್ಡಿನಲ್ಲಿ ಮಂಗಳವಾರ ಪಿಎಸ್‌ಐ ಹಾಗೂ ಸಿಬ್ಬಂದಿ ದಾಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ನುಗ್ಗಿ ಕಳ್ಳತನ
ಬಳ್ಳಾರಿ: ಮನೆಯ ಹಿಂಬಾಗಿಲಿನಿಂದ ಕಳ್ಳರು ನುಗ್ಗಿ ರು. 40 ಸಾವಿರ ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ನಗರದ ಕೌಲ್‌ಬಜಾರ್ ಪ್ರದೇಶದಲ್ಲಿರುವ ಮೇರಿ ಫಾತಿಮಾ ಅವರ ಮನೆಯ ಹಿಂಬಾಗಿಲಿನಿಂದ ನುಗ್ಗಿ ಮನೆಯಲ್ಲಿದ್ದ ರು. 40 ಸಾವಿರ ಮೌಲ್ಯದ ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಕೌಲ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement