ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಷ್ಟ್ರನಾಯಕನಾಗುವ ಭ್ರಮೆಯಲ್ಲಿ ಮೋದಿ

Lingaraj Badiger
Updated On : 24 Oct 2013, 11:00 am

ಹೊಸಪೇಟೆ: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರಾಷ್ಟ್ರ ನಾಯಕನಾಗುವ ಭ್ರಮೆಯಲ್ಲಿದ್ದು, ಗುಜರಾತ್‌ನಲ್ಲಿ ಸದ್ಭಾವನಾ ಯಾತ್ರೆ ಹೆಸರಿನಲ್ಲಿ ಕೋಟ್ಯಂತರ ಸರ್ಕಾರದ ಹಣವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಕಾರ್ಯಕರ್ತೆ ನಸ್ರೀನ್ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ದೇಶದಲ್ಲಿ ಹೆಸರು ಸಂಪಾದನೆ ಮಾಡುವ ದೃಷ್ಟಿಯಿಂದ ಗುಜರಾತ್ ರಾಜ್ಯದಲ್ಲಿ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಈ ದೇಶದ ಪ್ರಧಾನಿಯಾಗಬೇಕು ಎನ್ನುವ ಭ್ರಮೆಯಲ್ಲಿ ನರೇಂದ್ರ ಮೋದಿ ಈಗ ದೇಶದಲ್ಲಿ ಸಂಚಾರ ಆರಂಭಿಸಿದ್ದಾರೆ. ಆದರೆ ನರೇಂದ್ರ ಮೋದಿಯವರು ದೇಶಕ್ಕೆ ಪ್ರಧಾನಿಯಾದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು. ನರೇಂದ್ರ ಮೋದಿ ಅಭಿವೃದ್ಧಿಯೆಂದರೆ ಅದು ಬಿಜೆಪಿ, ಸಂಘ ಪರಿವಾರದ ಅಭಿವೃದ್ಧಿಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಗುಜರಾತ್ ಸರ್ಕಾರದ ಯೋಜನೆಗಳು ಸಂಘ ಪರಿವಾರದ ಪಾಲಾದ ಬಗ್ಗೆ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸ್ಲಂ ಜನಾಂದೋಲನ ರಾಜ್ಯ ಕಾರ್ಯದರ್ಶಿ ಎ. ನರಸಿಂಹಮೂರ್ತಿ, ರಾಜ್ಯ ಸಂಚಾಲಕ ರಾಮಚಂದ್ರ, ಸ್ಲಂ ಜನಾಂದೋಲನ ಸಮಿತಿ ಸಂಚಾಲಕಿ ಹುಲಿಗೆಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement