ಸಾಮೂಹಿಕ ವಿವಾಹ ಬಡವರಿಗೆ ಅನುಕೂಲ
ಹೂವಿನಹಡಗಲಿ: ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲ ಎಂದು ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದಲ್ಲಿ ಹಾಲಸ್ವಾಮಿ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದುಬಾರಿ ದಿನಗಳಲ್ಲಿ ದುಂದುವೆಚ್ಚ ವಿವಾಹ ಮಾಡಿಕೊಳ್ಳವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು. ನಾಗತಿಬಸಾಪುರದ ಗಿರಿರಾಜ ಹಾಲಸ್ವಾಮೀಜಿ, ತೆಲಗಿಯ ವೀರಭದ್ರ ಸ್ವಾಮೀಜಿ, ನಂದಿಗಾವಿಯ ಹಾಲಸಿದ್ದೇಶ್ವರ ಸ್ವಾಮೀಜಿ, ಹಿರೇಹಡಗಲಿಯ ಹಾಲವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣ ಹಾಲಸ್ವಾಮೀಜಿ, ಜಿಪಂ ಸದಸ್ಯ ಜಿ. ವಸಂತ, ತಾಪಂ ಸದಸ್ಯ ಶಾಂತಯ್ಯ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು. ಸಾಮೂಹಿಕ ವಿವಾಹದಲ್ಲಿ 28 ನವ ಜೋಡಿಗಳು ಹೊಸ ದಾಂಪತ್ಯಕ್ಕೆ ಕಾಲಿಟ್ಟರು.
--