29ರಂದು ರ್ಯಾಲಿ
ಬಳ್ಳಾರಿ: ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆಗಾಗಿ ಆಗ್ರಹಿಸಿ, ಅ. 29ರಂದು ಬೆಂಗಳೂರಿನಲ್ಲಿ ರ್ಯಾಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಬಸವದಳ ಬಳ್ಳಾರಿಯ ಪ್ರಧಾನ ಕಾರ್ಯದರ್ಸಿ ಕೆ.ವಿ. ರವಿಶಂಕರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವಗುರು ಬಸವಣ್ಣನವರಿಂದ 12ನೇ ಶತಮಾನದಲ್ಲಿ ಜನ, ಜಗ ಬದುಕಲೆಂದು ಕೊಡಲ್ಪಟ್ಟ ಧರ್ಮ ಲಿಂಗಾಯತ. ಇದು ಪ್ರಗತಿಪರ ಹಾಗೂ ವೈಚಾರಿಕ ಮನೋಭಾವದ ಒಂದು ಸ್ವತಂತ್ರ ಧರ್ಮವಾಗಿದೆ. ಲಿಂಗಾಯತ ಜಾತ್ಯತೀತ ಧೋರಣೆಯ ಧರ್ಮ. ಲಿಂಗಾಯತವು ಹುಟ್ಟಿನಿಂದ ಬರದೇ ಸಂಸ್ಕಾರದಿಂದ ಬರುತ್ತದೆ. ಯಾರು ಬೇಕಾದರೂ ಈ ಧರ್ಮವನ್ನು ಜಾತಿ, ಮತ, ಪಂಥ ಲಿಂಗ ಭೋದ ಭಾವವಿಲ್ಲದೇ, ಸ್ವೀಕರಿಸಿ ಲಿಂಗಾಯತರಾಗಬಹುದು. ಭಾರತ ದೇಶದಲ್ಲೇ ಹುಟ್ಟಿರುವ ಜೈನ, ಬೌದ್ಧ, ಸಿಕ್ ಧರ್ಮಗಳಿಗೆ ಸ್ವತಂತ್ರ ಧರ್ಮದ ಸಂವಿಧಾನಾತ್ಮಕ ಮಾನ್ಯತೆ ದೊರೆತಿರುವುದು ಅಲ್ಲದೇ ಧಾರ್ಮಿಕ ಅಲ್ಪಸಂಖ್ಯಾತರೆಂಬ ಸವಲತ್ತು ಸಿಕ್ಕಿದೆ. ಯಾವ ಕಾರಣಗಳಿಂದ ಜೈನ, ಸಿಖ್ ಧರ್ಮಗಳಿಗೆ ಸಂವಿಧಾನಾತ್ಮಕ ಮಾನ್ಯತೆ ಸಿಕ್ಕಿದೆಯೋ, ಅದೇ ರೀತಿ ಲಿಂಗಾಯತ ಧರ್ಮಕ್ಕೂ ಮಾನ್ಯತೆ ಸಿಗಬೇಕೆಂದು ಆಗ್ರಹಿಸಿ, ಅ. 29ರಂದು ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಐತಿಹಾಸಿಕ ಯಾತ್ರೆಗೆ ಬಳ್ಳಾರಿ ಜಿಲ್ಲೆಯಿಂದ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.