ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯ: ಜವರೇಗೌಡ

Lingaraj Badiger
Updated On : 25 Oct 2013, 10:55 am

ಕೂಡ್ಲಿಗಿ: ನವೆಂಬರ್ ತಿಂಗಳಾಂತ್ಯದವರೆಗೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕನ್ನಡ ಚಲನ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ತಪ್ಪಿದರೆ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗುವುದಾಗಿ ತಹಸೀಲ್ದಾರ್ ಜವರೇಗೌಡ ಎಚ್ಚರಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ನಿಮಿತ್ತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ. ಕಾರ್ಯಕ್ರಮ ನಡೆಸಲು ಪಟ್ಟಣದ ಚಂದ್ರಶೇಖರ ಆಝಾದ್ ರಂಗಮಂದಿರದಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಯಿತು. ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿವಿಧ ಕಲಾ ತಂಡಗಳು, ಸ್ತಬ್ಧ ಚಿತ್ರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವುದು. ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ  ಭಾಗವಹಿಸುವಿಕೆ. ತಾಲೂಕು ಮಟ್ಟದ ಎಲ್ಲ ಇಲಾಖೆ ಕಟ್ಟಡಗಳಿಗೆ ಅ. 31 ರಂದು ದೀಪಾಲಂಕಾರ ಮಾಡುವುದು ಸೇರಿ ಅನೇಕ ವಿಷಯಗಳನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
ಒತ್ತಾಯ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಜನರಿಗೆ ತಾಲೂಕು ಮಟ್ಟದ ರಾಜ್ಯೋತ್ಸವದಲ್ಲಿ ಸನ್ಮಾನಿಸಿ, ಪ್ರಶಸ್ತಿ ಪತ್ರ ವಿತರಿಸುವುದು. ಕನ್ನಡ ವಿಷಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಅಂತಿಮ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ಸೇರಿದಂತೆ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡಪರ ಸಂಘಟನೆಗಳು, ಮುಖಂಡರು ಒತ್ತಾಯಿಸಿದರು.
ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪುರಪ್ಪ, ಉಪಾಧ್ಯಕ್ಷ ಎಚ್. ಮಹೇಶ್, ಇಒ ಸೈಯದ್ ಹಜರತ್‌ಷಾ, ಹಿರಿಯ ನಾಗರಿಕ ಕೆ. ಮಲ್ಲಣ್ಣ, ಕರವೇ ಅಧ್ಯಕ್ಷ ಕಾಟೇರ್ ಹಾಲೇಶ್, ಹಿರೇಕುಂಬಳಗುಂಟೆ ಟಿ. ಉಮೇಶ್, ಪಪಂ ಸದಸ್ಯ ಎಸ್. ದುರುಗೇಶ್, ಬ್ಯಾಳಿ ವಿಜಯಕುಮಾರಗೌಡ, ಕಲ್ಲಹಳ್ಳಿ ಬಸಪ್ಪ, ಎ.ಎಂ. ವೀರಯ್ಯ, ಸಿ.ಬಿ. ಜಯರಾಂ ನಾಯಕ, ಬಿ.ಕೆ. ಜಯಮ್ಮ, ಕಸಾಪ ತಾಲೂಕು ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ಕೆ.ಎಂ. ವೀರೇಶ್, ಗುಪ್ಪಾಲ ಕಾರೆಪ್ಪ, ಸಾಲುಮನಿ ರಾಘವೇಂದ್ರ, ಅಂಬೇಡ್ಕರ್ ಸಂಘದ ಕರಿಬಸಪ್ಪ, ಹುಲಿಕುಂಟೆಪ್ಪ, ಮಂಜುನಾಥ ನಾಯಕ, ಹುಲಿಕೆರೆ ರಮೇಶ್‌ಗೌಡ, ಬಾಣದ ಶಿವಮೂರ್ತಿ, ಎಂ.ಬಿ. ಶಿವರಾಜ, ಪರಶುರಾಮ, ಬಿ. ರಾಘವೇಂದ್ರ, ಚಿನ್ನಾಪುರಪ್ಪ, ಚೌಡಾಪುರ ಗಂಗಾಧರ, ಅಂಜಿನಪ್ಪ, ಅಜ್ಜಣ್ಣ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement