ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಿಕ್ಷಕರ ಮತದಾರ ಪಟ್ಟಿ ಪರಿಷ್ಕರಣೆ

Lingaraj Badiger
Updated On : 25 Oct 2013, 10:56 am

ಹೊಸಪೇಟೆ:  ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರಕ್ಕೆ ಡಿ 1, 2013 ಅನ್ನು ಅರ್ಹತಾ ದಿನವನ್ನಾಗಿ ಪರಿಗಣಿಸಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಕಾರ್ಯಕ್ರಮ ಆರಂಭವಾಗಿದೆ.ಅರ್ಹತಾ ದಿನಾಂಕಕ್ಕೆ 3 ವರ್ಷಗಳ ಸತತ ಸೇವೆ ಸಲ್ಲಿಸಿದ ಪ್ರೌಢಶಾಲಾ ಮಟ್ಟಕ್ಕಿಂತ ಮೇಲ್ಪಟ್ಟ ಶಿಕ್ಷಕರು ತಮ್ಮ ಹೆಸರುಗಳನ್ನು ನಮೂನೆ-19ರಲ್ಲಿ ಭರ್ತಿ ಮಾಡಿ ಈ ಕೆಳಕಂಡ ಅಧಿಕಾರಿಗಳಿಗೆ ಅ. 30, 2013ರೊಳಗೆ ಸಲ್ಲಿಸಬಹುದಾಗಿದೆ. ಹೊಸಪೇಟೆ ಹೋಬಳಿಯ ಶಿಕ್ಷಕರು ಹೊಸಪೇಟೆ ತಹಸೀಲ್ದಾರರಲ್ಲಿ ಮತ್ತು ಕಮಲಾಪುರ ಹೋಬಳಿಯ ಶಿಕ್ಷಕರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ, ಕಂಪ್ಲಿ ಹೋಬಳಿಯ ಶಿಕ್ಷಕರು ಕಂಪ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಗಣಪತಿ ಲಮಾಣಿಯವರಲ್ಲಿ, ಮರಿಯಮ್ಮನಹಳ್ಳಿ ಹೋಬಳಿಯ ಶಿಕ್ಷಕರು ಮರಿಯಮ್ಮನಹಳ್ಳಿಯ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಾಣೇಶ್ ಕುಲಕರ್ಣಿ ಅವರ ಬಳಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ರಮೇಶ್ ಕೋನರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement