ಮುಖ್ಯಗುರುಗಳ ಮೇಲೆ ಹಲ್ಲೆ: ಖಂಡನೆ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ತಾಲೂಕಿನ ಹಂದ್ರಾಳು ಗ್ರಾಮದ ಸಹಿಪ್ರಾ ಶಾಲೆಯ ಪ್ರಭಾರಿ ಮುಖ್ಯಗುರುಗಳ ಮೇಲೆ ಗುರುವಾರ ಪಾಲಿಕೆ ಸದಸ್ಯ ಮತ್ತು ಆತನ ಸಹಚರರು ನಡೆಸಿದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್, ಕ್ಷೇತ್ರಶಿಕ್ಷಣಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಬಳಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಪ್ರಭುಗೌಡ ಮಾತನಾಡಿ, ಪ್ರಭಾರಿ ಮುಖ್ಯಗುರುಗಳ ಮೇಲಿನ ಹಲ್ಲೆಯನ್ನು ಸಂಘ ಖಂಡಿಸುತ್ತದೆ. ಎಲ್ಲ ಶಿಕ್ಷಕರಿಗೂ ರಕ್ಷಣೆ ನೀಡುವ ಕೆಲಸ ಮಾಡಬೇಕೆಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಜ್ಞಾನೇಶ್ವರಯ್ಯ, ಆರ್. ಕೊಟ್ರಗೌಡ, ಎಂ. ಶಂಭುಲಿಂಗಪ್ಪ, ಕೆ. ಕೊಟ್ರಪ್ಪ, ಕೆ. ರಾಮಪ್ಪ, ಎಸ್. ಕೊಟ್ರೇಶ, ಮುಖ್ಯಗುರುಗಳ ಸಂಘದ ಎ. ರಮೇಶ ಪತ್ತಾರ, ಬಿ. ನೀಲಪ್ಪ, ರುದ್ರಗೌಡ, ಮುಸ್ತಾಕ್, ಕರಿಯಪ್ಪ, ಜಿ.ಎಂ. ರಮೇಶ, ಎ. ನಾಗರಾಜ ನಿಯೋಗದಲ್ಲಿದ್ದರು. ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಮುಖಂಡ ರಂಗನಾಥ ಹವಾಲ್ದಾರ್ ಕೂಡ ಖಂಡಿಸಿದ್ದಾರೆ.