ಉಜ್ಜಿನಿ ಶ್ರೀಗಳ 2ನೇ ಪುಣ್ಯಾರಾಧನೆ
ಕೊಟ್ಟೂರು: ಲಿಂಗೈಕ್ಯ ಜಗದ್ಗುರು ಮರುಳಸಿದ್ಧ ಶಿವಾಚಾರ್ಯರು ವಾತ್ಸಲ್ಯಮಯಿ, ಪರಿಪೂರ್ಣ ಸಾಗರದ ದಯಾಮಯಿಯಾಗಿ ಸದಾ ಭಕ್ತರ ಹಿತಚಿಂತಕರಾಗಿದ್ದರು ಎಂದು ಉಜ್ಜಿನಿ ಜಗದ್ಗುರು ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಸಮೀಪದ ಉಜ್ಜನಿ ಪೀಠದಲ್ಲಿ ಲಿಂಗೈಕ್ಯ ಜಗದ್ಗುರುಗಳ ದ್ವಿತೀಯ ವರ್ಷದ ಪುಣ್ಯಾರಾಧನೆ ನಿಮಿತ್ತ ಅವರ ಕರ್ತೃ ಗದ್ದುಗೆಗೆ ಪೂಜೆ ನೆರವೇರಿಸಿ ಮಾತನಾಡಿ, ಉಜ್ಜಿನಿ ಪೀಠ ಸರ್ವತೋಮುಖ ಏಳಿಗೆಗೆ ಅಹರ್ನಿಶಿ ಶ್ರಮಿಸಿದ ಲಿಂಗೈಕ್ಯ ಗುರುಗಳು ನಂಬಿದ್ದ ತತ್ವ, ಸಿದ್ಧಾಂತ ಮತ್ತು ಮಾರ್ಗಸೂಚನೆಯಂತೆ ತಾವು ಪೀಠದ ಮತ್ತಷ್ಟು ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಪೀಠ ಬಹಳಷ್ಟು ಬೆಳವಣಿಗೆ ಕಾಣಲಿದೆ. ಇದಕ್ಕೆಲ್ಲ ಲಿಂಗೈಕ್ಯ ಶ್ರೀಗಳ ಆಶೀರ್ವಾದ ಕಾರಣ ಎಂದು ಸ್ಮರಿಸಿದರು. ಓಂಕಾರಶಾಸ್ತ್ರಿ ಲಿಂಗೈಕ್ಯ ಜಗದ್ಗುರುಗಳ ಕ್ರಿಯಾಸಮಾಧಿಗೆ ಹೋಮ, ಸಿದ್ಧಲಿಂಗಯ್ಯ ಶಾಸ್ತ್ರಿ ರುದ್ರಾಭಿಷೇಕ ನೆರವೇರಿಸಿದರು. ಎಂ.ಎಂ.ಜೆ. ಹರ್ಷವರ್ಧನ್, ಪೀಠದ ವ್ಯವಸ್ಥಾಪಕ ಲಿಂಗಶೆಟ್ಟಿ ಮತ್ತಿತರರು ಇದ್ದರು.