ಟ್ರ್ಯಾಕ್ಟರ್ನಲ್ಲಿ ಅದಿರು ಅಕ್ರಮ ಸಾಗಾಟ: ಪ್ರಕರಣ ದಾಖಲು
ಬಳ್ಳಾರಿ: ಜಿರೋ ಮೆಟರಿಲ್ಸ್ಗಳನ್ನು ಟ್ರ್ಯಾಕ್ಟರ್ನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿ, 3 ಟನ್ ಅದಿರು ಹಾಗೂ ಟ್ರ್ಯಾಕ್ಟರನ್ನು ಸೀಜ್ ಮಾಡಿರುವ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿಯಲ್ಲಿ ನಡೆದಿದೆ. ಹಲಕುಂದಿ ಸಮೀಪದಲ್ಲಿ ಗ್ರಾಮೀಣ ಠಾಣೆ ಪಿಎಸ್ಐ ಹೊಸಕೇರಪ್ಪ ಅವರು ಪರಿಶೀಲನೆ ನಡೆಸುತ್ತಿದ್ದಾಗ ಹೊನ್ನಳ್ಳಿಯಿಂದ ಹಲಕುಂದಿ ಕಡೆಗೆ ಬರುತ್ತಿರುವ ಟ್ರ್ಯಾಕ್ಟರ್ ತಡೆದು ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡುತ್ತಿದ್ದರು. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಟ್ರ್ಯಾಕ್ಟರ್ನ್ನು ಸೀಜ್ ಮಾಡಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾರ್ಮೀ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.