ಅನ್ನಪೂರ್ಣಾಬಾಯಿ ನಿಧನ
ಹೊಸಪೇಟೆ: ಮಾಜಿ ಶಾಸಕ ದಿ. ಸತ್ಯನಾರಾಯಣ ಸಿಂಗ್ ಅವರ ಪತ್ನಿ ಅನ್ನಪೂರ್ಣಾ ಬಾಯಿ (78) ಭಾನುವಾರ ನಿಧನರಾಗಿದ್ದಾರೆ.
ಮೃತರಿಗೆ ಹೊಸಪೇಟೆ ಮಾಜಿ ಶಾಸಕ ರತನ್‌ಸಿಂಗ್ ಸೇರಿದಂತೆ ಕಾಂಗ್ರೆಸ್ ಮುಖಂಡ ದೀಪಕ್‌ಕುಮಾರ್ ಸಿಂಗ್, ಉದ್ಯಮಿಗಳಾದ ದಿಲೀಪ್ ಸಿಂಗ್, ಪ್ರವೀಣ್ ಸಿಂಗ್ ಹಾಗೂ ಪುತ್ರಿಯರಾದ ಅರುಣಾ ಬಾಯಿ, ಸಂಧ್ಯಾ, ಸುಜಾತಾ ಸಿಂಗ್ ಸೇರಿದಂತೆ ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳು ಇದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ನಗರದ ರಾಣಿಪೇಟೆಯಲ್ಲಿರುವ ತೋಟದ ಮನೆಯಲ್ಲಿ ನಡೆಯಿತು. ಬಳ್ಳಾರಿ ಶಾಸಕ ಅನಿಲ್ ಲಾಡ್, ಸಂಡೂರು ಶಾಸಕ ಈ. ತುಕರಾಂ, ಮಾಜಿ ಸಚಿವ ಎನ್.ಎಂ. ನಭಿಸಾಬ್ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಎಸ್‌ವಿಕೆ ಕುಟುಂಬದ ಸದಸ್ಯರು ಸೇರಿದಂತೆ ಅಪಾರ ಬಂಧು-ಬಳಗದವರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಸಂತಾಪ: ಅನ್ನಪೂರ್ಣಾಬಾಯಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್, ಕಾಂಗ್ರೆಸ್ ಮುಖಂಡ ಎನ್.ವೈ. ಹನುಮಂತಪ್ಪ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.