ಎಪಿಎಂಸಿಗೆ ನೂತನ ನಿರ್ದೇಶಕರ ಆಯ್ಕೆ
ಬಳ್ಳಾರಿ: ಬಳ್ಳಾರಿ ಎಪಿಎಂಸಿಗೆ ನೂತನ ನಿರ್ದೇಶಕರಾಗಿ ಸಿಲ್ಲಾರ್ ಬಾಷಾ, ಟಿ. ಅನಿಲ್ ಕುಮಾರ್, ವೆಂಕಾನಾಯ್ಕ್ ಅವರನ್ನು ನಾಮನಿರ್ದೇಶನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಪಿಎಂಸಿ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ಕಲಂ 11(1) ರಡಿಯಲ್ಲಿ ಇಲಾಖೆಯ ಅಧೀನ ಕಾರ್ಯದರ್ಶಿ ಈ. ಪಾಪಣ್ಣ ಈ ಮೂವರನ್ನು ಬಳ್ಳಾರಿ ಎಪಿಎಂಸಿ ನಿರ್ದೇಶಕರನ್ನಾಗಿ ನೇಮಿಸಿ ಅದೇಶ ಹೊರಡಿಸಿದ್ದಾರೆ. ಎಪಿಎಂಸಿಗೆ ಆಯ್ಕೆಯಾದ ನೂತನ ನಿರ್ದೇಶಕರು ಎಪಿಎಂಸಿ ಅಭಿವೃದ್ಧಿಗೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಅನಿಲ್ ಲಾಡ್ ಸೂಚಿಸಿದರು. ಈ ಸಂದರ್ಭ ಪಾಲಿಕೆ ಸದಸ್ಯರಾದ ಗಾಜುಲ ಶೀನ, ಪರ್ವಿನ್ ಬಾನು, ಮುಖಂಡ ಅರ್ಜುನ್, ಹೂನ್ನೊರಪ್ಪ, ವಲಿಸಾಬ್, ಯತೀಂದ್ರ ಇತರರಿದ್ದರು.