ಬೈಕ್ಗೆ ಟಿಪ್ಪರ್ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಸಂಡೂರು ನಗರದ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ. ಮೃತನನ್ನು ಸಂಡೂರಿನ ರವಿ (22) ಎಂದು ಗುರುತಿಸಲಾಗಿದೆ. ಸಂಡೂರು ತಾಲೂಕಿನ ಧರ್ಮಪುರ ಗ್ರಾಮದ ಸಂದೀಪ್ ಗಾಯಗೊಂಡಿದ್ದಾನೆ. ರವಿ ಎನ್ನುವವರು ಸಂಡೂರಿನ ಕಡೆಗೆ ಹೋಗುತ್ತಿರುವಾಗ ಸಂದೀಪ್ ಲಿಫ್ಟ್ ಕೇಳಿದ್ದಾನೆ. ಬೈಕ್ ತಾರಾನಗರ-ಸಂಡೂರು ಸಿಮೆಂಟ್ ರಸ್ತೆಯಲ್ಲಿ ಹೋಗುತ್ತಿರುವ ಸಂಡೂರ್ ಸಮೀಪದಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ರವಿ ತೀವ್ರವಾಗಿ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತ ಪಟ್ಟಿದ್ದಾನೆ. ವಿಮ್ಸ್ನಲ್ಲಿ ಸಂದೀಪ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.