ರಂಗಗೀತೆಗಳ ಗಾಯನ ಕಾರ್ಯಕ್ರಮ ನಾಳೆ
ಹೊಸಪೇಟೆ: ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ರಂಗಗೀತೆಗಳ ಗಾಯನ ಕಾರ್ಯಕ್ರಮವು ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಅ. 29ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಮರಿಯಮ್ಮನಹಳ್ಳಿಯ ಕೊಟ್ರೇಶ್ ಲಕ್ಕಿಮರ ಮತ್ತು ತಂಡದವರಿಂದ ರಂಗ ಗೀತೆಗಳ ಗಾಯನ ಕಾರ್ಯಕ್ರಮ ಮತ್ತು ಕಾಕುಬಾಳು ಗ್ರಾಮದ ಕೆ. ಸಣ್ಣತಿಮ್ಮಪ್ಪ ಅವರಿಂದ ಕ್ಲಾರಿಯೋನೇಟ್ ವಾದನ ಕಾರ್ಯಕ್ರಮ ನಡೆಯಲಿದೆ.