ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯುತ್ ಶಾಕ್: ಬಾಲಕಿ ಸಾವು

Lingaraj Badiger
Updated On : 28 Oct 2013, 11:10 am

ಹೊಸಪೇಟೆ: ಮನೆಯಲ್ಲಿ ಕುಡಿಯುವ ನೀರಿನ ಮೋಟಾರ್ ಸ್ವಿಚ್‌ಆಫ್ ಮಾಡುವಾಗ ಶಾಕ್ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಮೃತಗೊಂಡ ಘಟನೆ ನಗರದ ಸಿದ್ದಲಿಂಗಪ್ಪ ಚೌಕಿಯಲ್ಲಿ ಭಾನುವಾರ ನಡೆದಿದೆ. ಸ್ಥಳೀಯ ನಿವಾಸಿ ಗೌಸ್ ಎಂಬವರ ಪುತ್ರಿ ಗೌಸಿಯಾ (13) ಮೃತಗೊಂಡಿರುವ ಬಾಲಕಿ. ಟಿ.ಬಿ. ಡ್ಯಾಂನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಭಾನುವಾರ ಶಾಲೆಗೆ ರಜೆ ಇರುವುದರಿಂದ ಮನೆಗೆ ಬಂದಿದ್ದಳು. ಕುಡಿಯುವ ನೀರು ಬಿಟ್ಟಿರುವುದರಿಂದ ಮನೆಯಲ್ಲಿ ನೀರು ಹಿಡಿದ ನಂತರ ವಿದ್ಯುತ್ ಮೋಟಾರ್ ಸ್ವಿಚ್ ಆಫ್ ಮಾಡುವಾಗ ಬಾಲಕಿಯ ಮೈಮೇಲೆ ಒದ್ದೆ ಬಟ್ಟೆಗಳು ಇರುವುದರಿಂದ, ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಾಗ ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ನಗರದ ನೂರು ಹಾಸಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯ ಬಾಲಕಿ ಗೌಸಿಯಾ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ನಿಂದ ಬಿದ್ದು ಮಹಿಳೆ ಸಾವು
ಬಳ್ಳಾರಿ: ಬೈಕ್‌ನಿಂದ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಪರಮದೇವಹನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತಳು ಬಳ್ಳಾರಿ ಇಂದಿರಾನಗರ ನಿವಾಸಿ ಪಾರ್ವತಿ(35). ವೈ. ಕಗ್ಗಲ್‌ನಲ್ಲಿ ತಮ್ಮ ಸಂಬಂಧಿಕರೊಬ್ಬರು ಮೃತ ಪಟ್ಟ ಹಿನ್ನೆಲೆಯಲ್ಲಿ ವೀರಾಂಜಿಯೇಲು ಎನ್ನುವವರ ಬೈಕ್‌ನಲ್ಲಿ ಹೋಗುತ್ತಿರುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದಳು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಪಿಡಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement