ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ದತ್ತಿ ಉಪನ್ಯಾಸ ಕಾರ್ಯಕ್ರಮ

Lingaraj Badiger
Updated On : 30 Oct 2013, 12:20 pm

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ತಾಲೂಕಿನ ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಚೇಳ್ಳಗುರ್ಕಿಯಲ್ಲಿ ಅ. 30ರಂದು ಬೆಳಿಗ್ಗೆ 10.30ಕ್ಕೆ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
ಎರ್ರಿಸ್ವಾಮಿ ಸಂಸ್ಮರಣ ದತ್ತಿ, ಲಿಂ. ನಾಡಗೌಡರ ಪಾರ್ವತಮ್ಮ ಮತ್ತು ಪಂಪನಗೌಡರ ಸ್ಮಾರಕ ದತ್ತಿ, ಗಂಗಾವತಿ ಪಂಪಾಪತಪ್ಪ ಮತ್ತು ನರಸಮ್ಮ ದತ್ತಿ, ಅಕ್ಕಿ ಬಸಣ್ಣ ಸ್ಮಾರಕ ದತ್ತಿ, ಪೆಂಡಕೂರ ವಿರೂಪಣ್ಣ ಶೆಟ್ಟಿ ಸ್ಮಾರಕ ದತ್ತಿ, ಹಗರಿ ಕ್ಯಾದಿಗೆಹಳ್ಳಿ ಇಟಗಿ ತಿಂದಪ್ಪ ದತ್ತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಚೇಳ್ಳಗುರ್ಕಿಯ ಯರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್‌ನ ಅಧ್ಯಕ್ಷ ಬಾಳನಗೌಡ ಉದ್ಘಾಟಿಸುವರು.
ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಅಧ್ಯಕ್ಷತೆ ವಹಿಸುವರು. ನಾಡಗೌಡರ ಮರೇಗೌಡ ಪಾಲ್ಗೊಳ್ಳಲಿದ್ದಾರೆ. ಶ್ರೀ ಎರ್ರಿಸ್ವಾಮಿ ಜೀವನ ಚರಿತ್ರೆ ವಿಷಯ ಕುರಿತು ಮಂಜುನಾಥ, ಮಾನವ ಧರ್ಮ ಕುರಿತು ವಿಶ್ವನಾಥ, ಜಾನಪದ ಸಾಹಿತ್ಯ ವಿಷಯ ಕುರಿತು ನಾಗರಾಜ, ಗ್ರಾಮೋದ್ಧಾರ ವಿಷಯ ಕುರಿತು ಉಮೇಶ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement