ಹೊಸಪೇಟೆ: ಇಂದು ವಿದ್ಯುತ್ ವ್ಯತ್ಯಯ
ಹೊಸಪೇಟೆ: ಮುನಿರಾಬಾದ್ನ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯವಿರುವುದರಿಂದ ಅ. 30ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಹೊಸಪೇಟೆ ನಗರದ ಬಾಲಾ ಟಾಕೀಸ್, ಸುಣ್ಣದ ಕಟ್ಟೆ, ಹಂಪಿ ರಸ್ತೆ, ಬಳ್ಳಾರಿ ರಸ್ತೆ, ಮೇನ್ ಬಜಾರ್, ರಾಣೀಪೇಟೆ, ರೋಟರಿ ವೃತ್ತ, ಕೋರ್ಟ್ ಏರಿಯಾ, ಸ್ಟೇಷನ್ ರಸ್ತೆ, ಪಟೇಲ್ ನಗರ, ಚಿತ್ತವಾಡ್ಗಿ, ಅಮರಾವತಿ, ತಿರುಮಲ ನಗರ, ಅನ್ನಪೂರ್ಣಾ ಬಡಾವಣೆ, ಸಾಹಿರಾಮ್ ಬಡಾವಣೆ, ಬಸವೇಶ್ವರ ಬಡಾವಣೆ, ಚಾಪಲ್ ಗಡ್ಡೆ, ದೇವಿನಗರ ಸೇರಿದಂತೆ ಕೆಲ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಹೊಸಪೇಟೆ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.