ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿಗಿಂದು ಕನ್ನಡಜ್ಯೋತಿ

Lingaraj Badiger
Updated On : 1 Nov 2013, 11:08 am

ಬಳ್ಳಾರಿ: ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಕ್ರಾಂತಿದಳ ವತಿಯಿಂದ ಹಂಪಿ ವಿರೂಪಾಕ್ಷನ ಸನ್ನಿಧಿಯಿಂದ ಕನ್ನಡಜ್ಯೋತಿ ತರಲು ದಳದ ಜಿಲ್ಲಾಧ್ಯಕ್ಷ ದರೂರು ಶಾಂತನಗೌಡ ನೇತೃತ್ವದಲ್ಲಿ ದಳದ ಸದಸ್ಯರು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಹಂಪಿಗೆ ಪ್ರಯಾಣ ಬೆಳೆಸಿದರು. ಇದಕ್ಕೆ ಕಲ್ಯಾಣ ಸ್ವಾಮೀಜಿ ಚಾಲನೆ ನೀಡಿದರು.
ಹಂಪಿಯಿಂದ ಕನ್ನಡಜ್ಯೋತಿಯನ್ನು ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಕನಕ ದುರ್ಗಮ್ಮ ದೇವಸ್ಥಾನಕ್ಕೆ ತಂದು, ಅಲ್ಲಿಂದ ಮೆರವಣಿಗೆಯಲ್ಲಿ ಕನ್ನಡ ಗೀತೆಗಳ ಹಾಡಿನೊಂದಿಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆಯುವ ಭುವನೇಶ್ವರಿ ದೇವಿ ಪೂಜೆಗೆ ಜ್ಯೋತಿ ಅರ್ಪಿಸಿ, ನಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗೆ ನೀಡಲಿದ್ದಾರೆ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೂಪನಗುಡಿ ಬಸವರಾಜ್, ಕುಂದಾಪುರ ನಾಗರಾಜ್, ಮೀನಳ್ಳಿ ಚಂದ್ರಶೇಖರ್, ಎಚ್. ಅರ್ಜುನ್, ಬಿ.ಎಂ. ಸಿದ್ದನಗೌಡ, ಅದ್ದಿಗೇರಿ ರಾಮಣ್ಣ, ಜಗನ್, ಚಾನಾಳ್ ಶೇಖರ್, ಮುದ್ದನಗೌಡ, ದೇಸಾಯಿ ಷಡಕ್ಷರಪ್ಪ, ಮಂಜುನಾಥ್, ವಿಜಯಕುಮಾರ್, ಜಿತೇಂದ್ರಗೌಡ, ವಾಸು, ವಂಶಿ, ಚೇತನ್, ಸೂರ್ಯ ಪ್ರತಾಪಗೌಡ, ಮಲ್ಲಿಕಾರ್ಜುನ, ಬಸವರಾಜ್ ಇತರರು ಇದ್ದರು.

ಇಂದು ವಿವಿಧ ಕಾರ್ಯಕ್ರಮ
ಹೊಸಪೇಟೆ: ನಗರದ ತಾಲೂಕು ಕ್ರೀಡಾಂಗಣದಲ್ಲಿ ನ. 1ರ ಬೆಳಗ್ಗೆ 9ಕ್ಕೆ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಏರ್ಪಡಿಸಲಾಗಿದೆ. ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ ಧ್ವಜಾರೋಹಣ ನೆರವೇರಿಸುವರು. ಶಾಸಕ ಬಿ.ಎಸ್. ಆನಂದ್ ಸಿಂಗ್ ಅಧ್ಯಕ್ಷತೆ ವಹಿಸುವರು. ಶೋಭಾ ಬೆಂಡಗೇರಿ, ಜೆ. ಶಾಂತಾ, ಟಿ.ಎಚ್. ಸುರೇಶ್ ಬಾಬು, ಎಸ್. ಭೀಮಾನಾಯ್ಕ, ಮೃತ್ಯುಂಜಯ ಜಿನಗಾ, ಅಮರನಾಥ ಪಾಟೇಲ್, ತಾರೀಹಳ್ಳಿ ಹಾಲಮ್ಮ, ಅನಿತಾ ಆನಂದ್, ಅನ್ನದಾನರೆಡ್ಡಿ, ಸುಮಂಗಳಮ್ಮ ಗುಬಾಜಿ, ತಿಪ್ಪೀಬಾಯಿ ಠಾಕ್ರಾನಾಯ್ಕ, ಪುರುಶೋತ್ತಮ, ಅಮಾಜಿ ಹೇಮಣ್ಣ, ರಮೇಶ್ ಕೋನರೆಡ್ಡಿ, ರಮೇಶ್ ತಳವಾರ್, ಮಹಮ್ಮದ್ ಮುನೀರ್, ಪಿ. ಸುನಂದಾ, ಡಿ.ಡಿ. ಮಾಳಗಿ ಮತ್ತಿತರರು ಭಾಗವಹಿಸುವರು. ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಸ್ತಬ್ಧಚಿತ್ರಗಳು, ಕಲಾ ತಂಡಗಳೊಂದಿಗೆ ತಾಲೂಕು ಕ್ರೀಡಾಂಗಣದಿಂದ ಎಂ.ಪಿ. ಪ್ರಕಾಶ್ ಕಲಾಮಂದಿರ ವರೆಗೆ ನಡೆಯಲಿದೆ. ಸಂಜೆ 6ಕ್ಕೆ ಟೌನ್ ರೀಡಿಂಗ್ ರೂಂ ಆವರಣದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement