ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

150 ರೈತರಿಗೆ ಕೃಷಿ ಸಾಲ ವಿತರಣೆ: ರವಿಸುಧಾಕರ

Vishwanath S
Updated On : 2 Sept 2013, 11:13 am

ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಸೆ. 1
ಬಳ್ಳಾರಿ ಜಿಲ್ಲೆಯಲ್ಲಿನ ಗ್ರಾಮೀಣ ಬ್ಯಾಂಕ್‌ಗಳ ಪೈಕಿ ಕರೂರು ಶಾಖೆ ಸಾಲ ವಿತರಣೆ ಹಾಗೂ ಮರುಪಾವತಿಯಲ್ಲಿ ಉನ್ನತ ಸ್ಥಾನದಲ್ಲಿದ್ದು, ಈ ಬ್ಯಾಂಕ್‌ನಿಂದ ಈಗಾಗಲೇ 360 ರೈತರಿಗೆ ಕೃಷಿ ಸಾಲ ಹಾಗೂ 1200 ರೈತರಿಗೆ ಬಂಗಾರದ ಸಾಲ ವಿತರಣೆ ಹಾಗೂ ಪ್ರಸಕ್ತ ಹೊಸದಾಗಿ 150 ರೈತರಿಗೆ ಕೃಷಿ ಸಾಲವನ್ನು ವಿತರಿಸಲಾಗಿದೆ ಎಂದು ಬ್ಯಾಂಕ್‌ನ ಮಹಾ ಪ್ರಬಂಧಕ ರವಿಸುಧಾಕರ ತಿಳಿಸಿದರು.
ತಾಲೂಕಿನ ಕರೂರು ಗ್ರಾಮದ ಶಾಖೆಯಲ್ಲಿ ವಿಲೀನ ಅನಂತರ ಹೊಸದಾಗಿ 150 ರೈತರಿಗೆ ಕಿಸಾನ್ ಕ್ರೆಡಿಟ್ ಯೋಜನೆಯಲ್ಲಿ ಸಾಲಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಗತಿ ಕೃಷ್ಣ ಬ್ಯಾಂಕ್ ವಿಲೀನದ ಮೂಲಕ ಮೊದಲಿಗೆ ಇದ್ದ 434 ಶಾಖೆಗಳೊಂದಿಗೆ 11 ಜಿಲ್ಲೆಗಳಲ್ಲಿ ಪ್ರಸಕ್ತ 602 ಶಾಖೆಗಳನ್ನು ಹೊಂದಿ, ಸುಮಾರು ವಿವಿಧ ಯೋಜನೆಗಳಲ್ಲಿ ರು. 14 ಸಾವಿರ ಕೋಟಿ ವ್ಯವಹಾರ ಹೊಂದಿದೆ ಎಂದರು.
ಬ್ಯಾಂಕ್ ರು. 800 ಕೋಟಿ ಸ್ವತಃ ಬಂಡವಾಳ ಹೊಂದಿದ್ದು, ರು. 6900 ಕೋಟಿ ಠೇವಣಿ ಹಾಗೂ ರು. 6970 ಕೋಟಿ ಸಾಲವಿತರಣೆ ಮಾಡಿದೆ. ಕೃಷಿ ಸಾಲ ವಿತರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ರು. 1100 ಕೋಟಿ ಕೈಗಾರಿಕೆ ವಲಯಕ್ಕೆ ನಿಗದಿಪಡಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ರು. 62 ಕೋಟಿ ಲಾಭಗಳಿಸಿದೆ. ಗ್ರಾಮೀಣ ಜನರ ಮನೆಬಾಗಿಲಿಗೆ ಸೇವೆ ಒದಗಿಸುವ ಉದ್ದೇಶದಿಂದ ಕಿರು ಬ್ಯಾಂಕಿಂಗ್ ವ್ಯವಸ್ಥೆ ಕೈಗೊಂಡಿರುವ ಮೊದಲ ಬ್ಯಾಂಕ್ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಹಕರಾದ ಕೆ.ಮಂಜುನಾಥಗೌಡ, ವಿ. ವಿರೂಪಾಕ್ಷಗೌಡ, ಕೋಟೇಶ್ವರರೆಡ್ಡಿ, ಇತರರು ಬ್ಯಾಂಕ್ ಸಿಬ್ಬಂದಿ ಕೊರತೆ ಸೇರಿದಂತೆ ಇತರೆ ಸಾಲ ಸೌಲಭ್ಯದಲ್ಲಿನ ಪ್ರಶ್ನೆಗಳನ್ನು ಹಾಗೂ ಬ್ಯಾಂಕ್ ಅಭಿವೃದ್ಧಿಗೆ ಬ್ಯಾಂಕ್‌ನಲ್ಲಿ ಲಾಕರ್ ಹಾಗೂ ಎಟಿಎಂ ವ್ಯವಸ್ಥೆ ಕೈಗೊಳ್ಳುವುದು ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮುಕ್ತ ಚರ್ಚೆ ಹಾಗೂ ಬ್ಯಾಂಕಿನ ಪ್ರಗತಿಗೆ ರೈತರಿಂದ ಸಲಹೆ ಪಡೆದು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಬಳ್ಳಾರಿ ಬ್ಯಾಂಕಿನ ಮುಖ್ಯ ಕಚೇರಿ ಉಪಮಹಾಪ್ರಬಂಧಕ ಷಣ್ಮುಖರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ 77 ಶಾಖೆಗಳು ಇದ್ದು, ರು. 2800 ಕೋಟಿ ವ್ಯವಹಾರ ನಡೆಸಿದೆ. ಈ ಪೈಕಿ ರು. 800 ಕೋಟಿ ಬೆಳೆ ಸಾಲ ವಿತರಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಾರ್ಚ್ ವೇಳೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸುಮಾರು 200 ಎಟಿಎಂ ಕೇಂದ್ರಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕ ಟಿ. ಸುಭಾಷ್‌ಚಂದ್ರ ಮಾತನಾಡಿದರು. ಸಭೆಯಲ್ಲಿ ನೂರಾರು ಪ್ರಗತಿ ಪರ ರೈತರು ಹಾಗೂ ವ್ಯವಹಾರಿಕ ಗ್ರಾಹಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement