ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪತ್ರಕರ್ತೆ ಮೇಲೆ ಅತ್ಯಾಚಾರ: ಖಂಡನೆ

Vishwanath S
Updated On : 3 Sept 2013, 11:17 am

ಹಗರಿಬೊಮ್ಮನಹಳ್ಳಿ: ಪೋಟೋ ಪತ್ರಕರ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುರುಳರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು. ನೊಂದಿರುವ ಪತ್ರಕರ್ತೆಯ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಗರಿಬೊಮ್ಮನಹಳ್ಳಿ ತಾಲೂಕ ಘಟಕ ಆಗ್ರಹಿಸಿದೆ. ಸೋಮವಾರ ಸಂಘದ ಅಧ್ಯಕ್ಷ ವೀರೇಶ ಮಜ್ಜಿಗಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆಯನ್ನು ತೀವ್ರವಾಗಿ ಖಂಡಿಸಿದ ಸದಸ್ಯರು, ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು. ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರಗಳು ನೊಂದಿರುವ ಪತ್ರಕರ್ತೆ ಬದುಕಿಗೆ ಅರ್ಥಿಕ ಭದ್ರತೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ಮಹಿಳೆಯರು ಹೆಚ್ಚಾಗಿ ಪತ್ರಿಕಾರಂಗಕ್ಕೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಹಿಳಾ ಪತ್ರಕರ್ತರ ಮೇಲೆ ಸಾಮೂಹಿಕ ಅತ್ಯಾಚಾರದಂತಹ ಘಟನೆಗಳು ನಡೆದರೆ ಈ ಕ್ಷೇತ್ರದತ್ತ ಮಹಿಳೆಯರು ಬರುವುದು ಕಷ್ಟ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪತ್ರಕರ್ತರಿಗೆ, ಅದರಲ್ಲೂ ಪತ್ರಕರ್ತೆಯರಿಗೆ ವಿಶೇಷ ರಕ್ಷಣೆ ವ್ಯವಸ್ಥೆ ಕಲ್ಪಿಸುವಂತೆ ಸಂಘ ಮನವಿ ಮಾಡಿಕೊಂಡಿದೆ.  ಸಂಘದ ಹಿರಿಯ ಸದಸ್ಯರಾದ ಹುಳ್ಳಿಪ್ರಕಾಶ, ಬುಡ್ಡಿ ಬಸವರಾಜ, ಜೆ.ನಾಗರಾಜ, ಬಿ.ಕೆ. ಬಸವರಾಜ, ಅಂಬರೀಷ್, ಶಿವಶಂಕರ, ಉಮಾಪತಿ ಶೆಟ್ಟರ್, ಫಕ್ರುದ್ದೀನ್, ರಾಜವಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement