ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯಶಸ್ವಿನಿ ಯೋಜನೆ ನೋಂದಣಿ: ಶುಲ್ಕದಿಂದ ವಿನಾಯಿತಿ

Vishwanath S
Updated On : 3 Sept 2013, 11:17 am

ಬಳ್ಳಾರಿ:  ಸರ್ಕಾರವು ಯಶಸ್ವಿನಿ ಯೋಜನೆಗೆ ಪ. ಸದಸ್ಯರ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಅವರಿಗೆ ಯಶಸ್ವಿನಿ ಯೋಜನೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಕಲ್ಲೊಳಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ 10 ವರ್ಷಗಳಿಂದಲೂ ಯಶಸ್ವಿನಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದರೂ ಪ. ಜಾತಿ ಮತ್ತು ಪ. ವರ್ಗದ ಸದಸ್ಯರ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಇದಕ್ಕೆ ಆರ್ಥಿಕ ದುರ್ಬಲತೆಯೇ ಕಾರಣವೆಂದು ಸರ್ಕಾರ ಮನಗಂಡು ಈ ಸೌಲಭ್ಯ ಒದಗಿಸಿದೆ.
ಇನ್ನುಮುಂದೆ ಪರಿಶಿಷ್ಟರ ವಾರ್ಷಿಕ ವಂತಿಗೆಯನ್ನು ಯಶಸ್ವಿನಿ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು. ಪ. ಜಾತಿ ಮತ್ತು ಪಂಗಡದವರು ಕೇವಲ ರು. 10 ಪ್ರೋತ್ಸಾಹ ಧನ ಮಾತ್ರ ಪಾವತಿಸಿ ಯಶಸ್ವಿನಿ ಸದಸ್ಯರಾಗಬಹುದು. ಯಶಸ್ವಿನಿ ಸದಸ್ಯರಿಗೆ ನೀಡಲಾಗುವ ಗುರುತಿನ ಕಾರ್ಡ್‌ನ ಕಚೇರಿ ಪ್ರತಿ ಮತ್ತು ಸದಸ್ಯರ ಪ್ರತಿಗಳಲ್ಲಿ ಕಡ್ಡಾಯವಾಗಿ ಪ. ಜಾತಿ ಮತ್ತು ಪ. ಪಂಗಡ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement