2.20 ಲಕ್ಷದ ಪಡಿತರ ಅಕ್ಕಿ ವಶ
ಬಳ್ಳಾರಿ: ಪಡಿತರ ಅಕ್ಕಿಯನ್ನು ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 50 ಕೆ.ಜಿ. ತೂಕದ 2.20 ಲಕ್ಷ ಮೌಲ್ಯದ 400 ಚೀಲ ಪಡಿತರ ಅಕ್ಕಿಯನ್ನು ಸಿರುಗುಪ್ಪದಲ್ಲಿ ವಶಪಡಿಸಿಕೊಳ್ಳಲಾಗಿದೆ. ಪಟ್ಟಣದ ಸಿಂಧನೂರು ರಸ್ತೆಯ ಶ್ರೀ ಸಾಯಿ ರೈಸ್ ಇಂಡಸ್ಟ್ರೀಸ್‌ನಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿ, ಮಾರುತ್ತಿರುವ ಕುರಿತು ಸಿರುಗುಪ್ಪ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಖಚಿತ ಮಾಹಿತಿ ಪಡೆದು ಈ ದಾಳಿ ನಡೆಸಿದರು.