ಬೇಲೆಕೇರಿ ಅದಿರು ನಾಪತ್ತೆ: ಮತ್ತೊಬ್ಬ ವ್ಯಕ್ತಿ ಬಂಧನ
ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರ ಅಂತಾರಾಷ್ಟ್ರೀಯ ವ್ಯವಹಾರಗಳ ಪ್ರತಿನಿಧಿಯೆಂದೇ ಬಿಂಬಿತವಾಗಿರುವ ಐಎಸ್ಸಿ (ಇಂಟಿಗ್ರೇಟೆಡ್ ಲಾಜಿಸ್ಟಿಕ್ ಕಂಪನಿ) ಮಾಲೀಕ ಸೋಮಶೇಖರ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬುಧವಾರ ವಿಚಾರಣೆಗೆಂದು ಕರೆಯಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು ಬಳಿಕ ವಶಕ್ಕೆ ತೆಗೆದುಕೊಂಡಿದ್ದಾರೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಪೈಕಿ ಸೋಮಶೇಖರ 15ನೇ ವ್ಯಕ್ತಿ. ಇನ್ನೂ 10ಕ್ಕೂ ಹೆಚ್ಚು ಜನರ ಬಂಧನ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.