ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಉತ್ತಮ ಶಿಕ್ಷಣ ನೀಡಿ ಸದೃಢ ರಾಷ್ಟ್ರ ಕಟ್ಟಲು ಶ್ರಮಿಸಿ

Vishwanath S
Updated On : 6 Sept 2013, 11:02 am

ಹಗರಿಬೊಮ್ಮನಹಳ್ಳಿ: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸದೃಢ ರಾಷ್ಟ್ರ ಕಟ್ಟುವ ವಿದ್ಯಾರ್ಥಿ ಸಮೂಹವನ್ನು ರೂಪಿಸಬೇಕು ಎಂದು ದಾವಣಗೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಗೋಪ್ಯಾನಾಯ್ಕ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಗುರುವಾರ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಮಗು ಕೂಡ ಶಿಕ್ಷಣದಿಂದ ವಂಚಿತನಾಗಬಾರದೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶಾಲಾ ಕೊಠಡಿಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿಸುವ ಮೂಲಕ ಸರ್ಕಾರದ ಆಶಯವನ್ನು ಈಡೇರಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದರು.
ಶಿಕ್ಷಕರಿಗೆ ಸನ್ಮಾನ: ಈ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕೊಟ್ರಗೌಡ, ವೀರಣ್ಣ ಹೊಳಗುಂದಿ ಸೇರಿದಂತೆ ನಿವೃತ್ತ, ಸೇವೆಯಲ್ಲಿ ನಿಧನರಾದ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಂದಿಪುರದ ಮಹೇಶ್ವರ ಸ್ವಾಮೀಜಿ, ಹಳೇ ಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನ ವೆಂಕಟೇಶ, ಜಿಪಂ ಸದಸ್ಯೆ ಹೇಮ್ಲವ್ವ ಕೃಷ್ಣನಾಯ್ಕ, ತಾಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಸದಸ್ಯೆ ಪವಾಡಿ ಗಂಗಮ್ಮ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಪ್ರಭುಗೌಡ, ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಕೊಟ್ರದೇವರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಜ್ಞಾನೇಶ್ವರಯ್ಯ, ಶಿಕ್ಷಕರ ಸಂಘದ ಎಸ್.ವಿ. ಪಾಟೀಲ, ರಾಜೇಶ್ವರಿ, ಶಶಿಕಲಾ, ತಾಪಂ ಇಒ ಕೇಣಿಬಸಪ್ಪ ಸೇರಿದಂತೆ ಹಲವರು ಇದ್ದರು. ಬಿಇಒ ಕೆ. ರಾಮನಗೌಡ ಪ್ರಾಸ್ತಾವಿಕ ಮಾತನಾಡಿದರು. ಪರಮೇಶ್ವರಯ್ಯ ಸೋಪ್ಪಿಮಠ ನಿರೂಪಿಸಿದರು. ಬಿ. ಕೊಟ್ರಪ್ಪ, ಮಾಣಿಕ್ಯಚಾರ್ ಸ್ವಾಗತಿಸಿದರು.
ನಿರೂಪಣೆ ವಿವಾದ...
ಶಿಕ್ಷಕರು ಕಾರ್ಯಕ್ರಮದ ನಿರೂಪಣೆ ಮಾಡುವ ವಿಚಾರವಾಗಿ ಹಾದಿ ಬೀದಿ ರಂಪ ಮಾಡಿಕೊಂಡ ಘಟನೆ ಜರುಗಿತು. ಶಿಕ್ಷಕರ ದಿನಾಚರಣೆ ಸಮಾರಂಭದ ನಿರೂಪಣೆ ಜವಾಬ್ದಾರಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದ ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ಅವರಿಗೆ ತಾಲೂಕಾಡಳಿತ ವಹಿಸಿತ್ತು. ಆದರೆ ಸೊಪ್ಪಿಮಠ ಅವರಿಗೆ ಜವಾಬ್ದಾರಿ ನೀಡಿರುವುದಕ್ಕೆ ಪ್ರೌಢಶಾಲಾ ದೈಹಿಕ ಶಿಕ್ಷಕ ಎಂ.ಪಿ.ಎಂ. ಮಂಜುನಾಥ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಬಿಇಒ ಕೆ. ರಾಮನಗೌಡ ಅವರನ್ನು ಶಿಕ್ಷಕರ ಸಮ್ಮುಖದಲ್ಲೇ ಏರು ಧ್ವನಿಯಲ್ಲಿ ಬಹಿರಂಗವಾಗಿ ತೀವ್ರ ತರಾಟೆಗೆ ತೆಗೆದುಕೊಂಡರು. ಬಿಇಒ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದು ನೆರೆದಿದ್ದ ಬಹುತೇಕ ಹಿರಿಯ ಶಿಕ್ಷಕರಿಗೆ ತೀವ್ರ ಕಸಿವಿಸಿಯನ್ನುಂಟು ಮಾಡಿತು. ಹಲವು ಶಿಕ್ಷಕರು ತಾಲೂಕಾಡಳಿತದ ನಿರ್ಧಾರಕ್ಕೆ ಬೆಂಬಲವಾಗಿ ನಿಂತು, ಮಂಜುನಾಥ ವೈಖರಿಯನ್ನು ಖಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement