ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗರ್ಭಿಣಿಯರಿಗೆ ಸೀಮಂತ ಕಾರ್ಯ

Lingaraj Badiger
Updated On : 7 Sept 2013, 11:32 am

ಹೂವಿನಹಡಗಲಿ: ತಾಲೂಕಿನ ಹರವಿ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ತಾಯಂದಿರ ಮರಣ ಮತ್ತು ಶಿಶು ಮರಣ ಕಡಿಮೆ ಮಾಡುವುದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸುರಕ್ಷಿತ ತಾಯಿ, ಮಗುವಿಗಾಗಿ ಸರ್ಕಾರದಿಂದ ಅನೇಕ ಯೋಜನೆಗಳಿದ್ದು, ತಾಯಂದಿರ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಲು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಜನನಿ ಸುರಕ್ಷಾ- ಶಿಶು ಸುರಕ್ಷಾ ಕಾರ್ಯಕ್ರಮದಡಿ ಉಚಿತ ಹೆರಿಗೆ ಸೇವೆ ಮತ್ತು ಉಚಿತ ಶಸ್ತ್ರಚಿಕಿತ್ಸೆ, ಸರಳ ಹೆರಿಗೆಯಾದಲ್ಲಿ ಎರಡು ದಿನ, ಶಸ್ತ್ರಚಿಕಿತ್ಸೆ ವೇಳೆ ಏಳುದಿನ ಊಟದ ವ್ಯವಸ್ಥೆ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ ಉಚಿತ ರಕ್ತದ ಪೂರೈಕೆ, ಉಚಿತ ಔಷಧಿ ಪ್ರಯೋಗಾಲಯ ಸೇವೆ ಸೇರಿದಂತೆ ಯೋಜನೆಗಳ ಲಾಭವನ್ನು ಎಲ್ಲಾ ಗರ್ಭಿಣಿಯರು ಪಡೆಯಬೇಕೆಂದರು.
ಕುರುವತ್ತಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ತಳವಾರ ಅಧ್ಯಕ್ಷತೆ ವಹಿಸಿದ್ದರು. ಸಿ. ಸುಶಿಲಮ್ಮ, ಬಿ. ಪುಟ್ಟಮ್ಮ, ಬಿ. ಮಲ್ಲೇಶ, ಚಿಕ್ಕಬಿದರಿ ನಿಂಗಪ್ಪ, ಎ. ನಾಗರಾಜಪ್ಪ, ಎಚ್. ಚಂದ್ರಪ್ಪ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹೊಳಲು ನಿಂಗಪ್ಪ ಗುಂಜಾಳ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರಾದ ಬಿ. ಪ್ರಭಾವತಿ, ಕೆ. ಹೇಮಾ, ಸಿ. ಶಶಿಕಲಾ ಮತ್ತು ಅಂಗನವಾಡಿ ಕಾರ್ಯಕರ್ತೆ ಟಿ. ದ್ರಾಕ್ಷಾಯಣಿ, ಪಿ. ಶಿವಲೀಲಾ, ಲಕ್ಷ್ಮೀ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಪ್ರಾರ್ಥಿಸಿದರು. ಬಿ. ಸುಧಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement