ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರೌಢಶಾಲೆ ಎಸ್‌ಡಿಎಂಸಿ ಆಯ್ಕೆಗೆ ಹಗ್ಗಜಗ್ಗಾಟ

Lingaraj Badiger
Updated On : 7 Sept 2013, 11:42 am

ಕೂಡ್ಲಿಗಿ: ತಾಲೂಕಿನ ಕಂದಗಲ್ಲು ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಆಯ್ಕೆ ತಿಂಗಳಿಂದಲೂ ಗ್ರಾಮದ ಎರಡು ಗುಂಪುಗಳ ನಡುವೆ ನಡೆದಿದ್ದ ಹಗ್ಗಜಗ್ಗಾಟ ಕೊನೆಗೆ ಶಾಲಾ ಮಕ್ಕಳ ಪೋಷಕರೆ 9 ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಗುಂಪುಗಳ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕಂದಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಗಜಾಪುರ- ಕಂದಗಲ್ಲು ಎರಡು ಗ್ರಾಮಗಳ ಮಧ್ಯೆ ಇದ್ದು, ಈ ಶಾಲೆಗೆ ಕಂದಗಲ್ಲು ಹಾಗೂ ಗಜಾಪುರ ಎರಡು ಗ್ರಾಮಗಳ ಮಕ್ಕಳು ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ತಿಂಗಳಿನಿಂದ ಶಾಲಾಭಿವೃದ್ಧಿ ಸಮಿತಿ ರಚನೆ ವಿಷಯದಲ್ಲಿ ಎರಡು ಗುಂಪುಗಳಿಂದ ಆರೋಪ, ಪ್ರತ್ಯಾರೋಪಗಳಿದ್ದವು. ಹೀಗಾಗಿ ಈ ಸಮಸ್ಯೆ ಬಗೆಹರಿಸುವುದೇ ಒಂದು ಸವಾಲಾಗಿತ್ತು. ಬುಧವಾರ ಶಾಲಾ ಮಕ್ಕಳಿಗೆ ಸಂಬಂಧಿಸಿದ ಬಹುತೇಕ ಪೋಷಕರು ಖುದ್ದು ಹಾಜರಾಗಿ ನೂತನ 9 ಸದಸ್ಯರನ್ನು ಆಯ್ಕೆ ಮಾಡಿದರು. ಗಲಾಟೆ ನಡೆಯಬಹುದೆಂಬ ಸೂಚನೆ ಇದ್ದುದರಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳೀಯ ಶಾಸಕರು ಸಮಿತಿ ಅಧ್ಯಕ್ಷರಾಗಿದ್ದು, ಸದಸ್ಯರನ್ನು ಮಾತ್ರ ಆಯ್ಕೆ ಮಾಡುವ ಅಧಿಕಾರ ಪೋಷಕರಿಗಿದೆ. ಹೀಗಾಗಿ ಪೋಷಕರೇ 9 ಸದಸ್ಯರನ್ನು ಆಯ್ಕೆ ಮಾಡಿದರು. ಡಿ. ಶಾಂತಮ್ಮ, ಬಿ. ಗೌರಮ್ಮ, ಡಿ. ಲಲಿತಮ್ಮ, ಜುಲ್ಕಿ ರಾಜಪ್ಪ, ಬಾರಿಕರ ಚನ್ನಬಸಪ್ಪ, ಎಚ್.ಕೆ. ಮರಿಯಪ್ಪ, ದೇವರಕೊಳ್ಳದ ಕೊಟ್ರೇಶ್, ಜಲ್ದಿಮಪ್ಪರ ಕೊಟ್ರೇಶ್, ಕೆ. ರೇವಣಸಿದ್ದಪ್ಪ ಇವರನ್ನು ಆಯ್ಕೆ ಮಾಡಲಾಯಿತು. ಈ ಪಟ್ಟಿ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಅವರಿಂದ ಓಕೆಯಾದರೆ ಮಾತ್ರ ಅಂತಿಮವಾಗುತ್ತದೆ. ಶಾಲೆಗಳಲ್ಲಿ ರಾಜಕೀಯ ಜಿದ್ದಾಜಿದ್ದಿ ಎಲ್ಲ ಕಡೆ ನಡೆಯುತ್ತಿದ್ದು, ಪೋಷಕರೆ ಆಯ್ಕೆ ಮಾಡಿದ ಸಮರ್ಥ ಸದಸ್ಯರು ಆಯ್ಕೆಯಾದರೆ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ ಎಂಬುದನ್ನು ಮಕ್ಕಳ ಪೋಷಕರು ತೋರಿಸಿಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement