ವಕೀಲರ ಸಂಘದ ಚುನಾವಣೆ: ರಂಗೇರಿದ ಕಣ
ಬಳ್ಳಾರಿ: ಮೂರು ವರ್ಷಕ್ಕೊಮ್ಮೆ ನಡೆಯುವ ಬಳ್ಳಾರಿ ವಕೀಲರ ಸಂಘದ ಚುನಾವಣೆ ಸೆ. 13ರಂದು ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದೆ. ಅಧ್ಯಕ್ಷರು, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗೂ 9 ಜನ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎ ಮತ್ತು ಬಿ ಪೆನಾಲ್ ನಡುವೆ ಪೈಪೋಟಿ ಆರಂಭವಾಗಿದೆ. ಕಳೆದ ಬಾರಿ ಬಿ ಪೆನಾಲ್‌ನಲ್ಲಿರುವವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಇದೀಗ ಎ ಮತ್ತು ಬಿ ಪೆನಾಲ್ ನಡುವೆ ಪೈಪೋಟಿ ಆರಂಭವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಪಿ. ಸಿದ್ದಾರೆಡ್ಡಿ, ವೈ. ರಂಗನಾಥ್‌ರಾವ್, ಎನ್. ಸಿದ್ದಪ್ಪ ಕಣದಲ್ಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅನ್ವರ್‌ಬಾಷಾ, ಬಿ.ಡಿ. ಚಿದಾನಂದ, ಎನ್. ಮಲ್ಲಿಕಾರ್ಜುನ, ಮಂಜುನಾಥ ಹೆಗ್ಡೆ ಕಣದಲ್ಲಿದ್ದಾರೆ. ಇನ್ನು ಕಾರ್ಯದರ್ಶಿ ಸ್ಥಾನಕ್ಕೆ ಡಿ. ರಾಮಕೃಷ್ಣ, ರಾಮಬಹ್ರ್ಮಂ, ಚಂದ್ರಶೇಖರ ರೆಡ್ಡಿ ಸ್ಪರ್ಧಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಎಲ್.ಟಿ. ಶೇಖರ್, ಕಾಳಿಂಗರಾಜ ಕಣದಲ್ಲಿದ್ದು, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಟಿ. ತಿಪ್ಪೇರುದ್ರ, ಎಂ. ಪ್ರಭಾವತಿ, ಚಂದ್ರಕಲಾ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 9 ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ 18ಕ್ಕೂ ಹೆಚ್ಚು ವಕೀಲರು ಕಣಕ್ಕಿಳಿದಿದ್ದಾರೆ.
ಈಗಾಗಲೇ ಸ್ಪರ್ಧೆ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂಂದಿಗೆ ಸಭೆ ನಡೆಸುವ ಮೂಲಕ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ. ಸೆ. 14 ಮತ್ತು 15ರಂದು ಮತಎಣಿಕೆ ಕಾರ್ಯ ನಡೆಯಲಿದೆ.