ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬೆಪ್ಪತಕ್ಕಡಿ ಬೋಳೆ ಶಂಕರ, ಏಕಲವ್ಯ ಪ್ರದರ್ಶನ

Lingaraj Badiger
Updated On : 11 Sept 2013, 11:09 am

ಹೂವಿನಹಡಗಲಿ: ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ಪ್ರದರ್ಶನಗೊಂಡ ಬೆಪ್ಪ ತಕ್ಕಡಿ ಬೋಳೆ ಶಂಕರ ಮತ್ತು ಏಕಲವ್ಯ ಗದ್ಯ ನಾಟಕಗಳು ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮೂಡಿಸುವಲ್ಲಿ ಯಶಸ್ವಿಯಾದವು.
ಕೊಪ್ಪಳದ ಹಾಲ್ಕುರಿಕೆ ಥಿಯೇಟರ್ ಹಮ್ಮಿಕೊಂಡಿರುವ ಕಾಲೇಜು ರಂಗ ಪಯಣದ ಎರಡು ರಂಗ ಪ್ರಯೋಗಗಳು ಜಿಬಿಆರ್ ಕಾಲೇಜಿನಲ್ಲಿ ಪ್ರದರ್ಶನ ಕಂಡವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರ ಹಾಸ್ಯ ಪ್ರಧಾನವಾದ ಬೆಪ್ಪ ತಕ್ಕಡಿ ಬೋಳೆ ಶಂಕರ ನಾಟಕ ವಿದ್ಯಾರ್ಥಿಗಳಲ್ಲಿ ನಗೆ ಅಲೆ ಎಬ್ಬಿಸುವ ಮೂಲಕ ಗಂಭೀರ ಚಿಂತನೆ ಮೂಡಿಸಿತು. ಶ್ರಮ ಜೀವನದಿಂದ ವಿಮುಖವಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ಸರಳ ಬದುಕನ್ನು ಮೌಲ್ಯವಾಗಿಸಿಕೊಂಡು ಬದುಕು ಸಾಗಿಸುವುದನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ ಕಲಾವಿದರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.
ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ಏಕಲವ್ಯ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದ ಕಲಾವಿದರು, ತುಳಿತಕ್ಕೊಳಗಾದವರ ಬದುಕಿಗೆ ಹೊಸ ಭರವಸೆ ಮೂಡಿಸುವುದು ನಾಟಕದ ತಿರುಳನ್ನು ದೃಶ್ಯ ಮಾಧ್ಯಮದ ಮೂಲಕ ಯಶಸ್ವಿ ರಂಗ ಪ್ರದರ್ಶನ ಕಂಡಿತು. ಸಾಮಾಜಿಕ ಅನ್ಯಾಯಕ್ಕೊಳಗಾದವರ ಬದುಕಿನ ತೋಟದಲ್ಲಿ ಸಮಾನತೆಯ ಹೂವನ್ನು ಅರಳಿಸಿದ ಈ ನಾಟಕವನ್ನು ಕಲಾವಿದರು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಹೆಚ್ಚು ಅರ್ಥ ತಂದುಕೊಟ್ಟಿತು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ ಚಿದಾನಂದ ಮಾತನಾಡಿನಾಟಕಗಳ ರಂಗ ಪ್ರಯೋಗಕ್ಕೆ ಚಾಲನೆ ನೀಡಿದ ದರು. ಕಾರ್ಯಕ್ರಮದಲ್ಲಿ ಪಪೂ ಕಾಲೇಜು ಪ್ರಾಚಾರ್ಯ ಡಾ.ಎ.ಎಂ. ರಾಜಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಪ್ರಭಾರಿ ಪ್ರಾಚಾರ್ಯ ಎನ್. ವರಕುಮಾರಗೌಡ, ಯೋಜನಾ ವೇದಿಕೆ ಅಧ್ಯಕ್ಷ ಪ್ರೊ.ಎಸ್.ಎಸ್.ಪಾಟೀಲ, ರಂಗಭಾರತಿ ಕಾರ್ಯದರ್ಶಿ ಎಸ್. ದ್ವಾರಕೇಶ ರೆಡ್ಡಿ, ಕಾಲೇಜು ರಂಗ ಪಯಣದ ಕಲಾವಿದ ರವಿಕುಮಾರ್ ಬಿಸರಹಳ್ಳಿ ಉಪಸ್ಥಿತರಿದ್ದರು. ಉಪನ್ಯಾಸಕ ಎಚ್.ಎಂ.ಗುರುಬಸವರಾಜಯ್ಯ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement