ಕಿಶೋರಿ ತರಬೇತಿ ಕಾರ್ಯಕ್ರಮ
ಕೊಟ್ಟೂರು: ಮಹಿಳೆ ಸಮಾಜದಲ್ಲಿ ಭಯ ಭೀತಿ ಇಲ್ಲದೆ ಮುಕ್ತವಾಗಿ ಜೀವನ ಸಾಗಿಸುವ ಜತೆಗೆ ತಮಗೆ ಸಿಗಬೇಕಾದ ಮೂಲಭೂತ ಹಕ್ಕನ್ನು ಯಾವುದೇ ಮುಲಾಜಿಲ್ಲದೆ ಪಡೆಯಬೇಕು. ತಮ್ಮ ಹಕ್ಕಿಗೆ ಧಕ್ಕೆ ತರುವ ಘಟನೆಗಳು ಸಂಭವಿಸಿದಲ್ಲಿ ಮಹಿಳಾ ಆಯೋಗದ ಸಂಪರ್ಕ ಪಡೆಯಲು ಮುಂದಾಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹನುಮಂತಮ್ಮ ತಿಳಿಸಿದರು.
ಪಟ್ಟಣದ ಗುರುಬಸವೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಜಾಗೃತಿ ಕುರಿತಾದ ಕಿಶೋರಿ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಸಿಆರ್ಪಿ ಎಸ್. ಚಂದ್ರಣ್ಣ ಮಾತನಾಡಿ, ಮಹಿಳೆಯ ಭದ್ರತೆಗೆ ಕಿಶೋರಿಯಂತಹ ಕಾರ್ಯಕ್ರಮಗಳು ಪೂರಕವಾಗಿ ಹುಟ್ಟಿಕೊಂಡಿವೆ. ಇದರ ಲಾಭ ಪಡೆದುಕೊಳ್ಳುವತ್ತ ಕಿಶೋರಿಯರೊಂದಿಗೆ ಪಾಲಕರು ಮುಂದಾಗಬೇಕೆಂದರು.
ಕಿಶೋರಿ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಎನ್.ಎಂ.ಸಿ. ಓಂಕಾರಮ್ಮ, ಎಸ್.ಎಂ.ನಳಿನಾ ತರಬೇತಿ ವಿವರಗಳನ್ನು ವಿದ್ಯಾರ್ಥಿನಿಯರಿಗೆ ವಿವರಿಸಿದರು. ಮುಖ್ಯಗುರು ಎಚ್.ಎಂ. ಗುರುಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಶಶಿಕಲಾ, ತಿಪ್ಪಮ್ಮ ಗುರುಬಸವರಾಜ ಪಾಲ್ಗೊಂಡಿದ್ದರು.
--