ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವು

Lingaraj Badiger
Updated On : 12 Sept 2013, 10:54 am

ಹೂವಿನಹಡಗಲಿ: ನೀರಿನ ತೊಟ್ಟಿಯಲ್ಲಿ ಬಾಲಕಿ ಬಿದ್ದು ಸಾವಪ್ಪಿರುವ ದುರ್ಘಟನೆ ಬುಧವಾರ ಹೂವಿನಹಡಗಲಿ ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಪಟ್ಟಣದ ನಿವಾಸಿ ವಿನೋದಕುಮಾರ ಅವರ ಪುತ್ರಿ ಹರಿಣಿ (2) ಎಂದು ತಿಳಿದು ಬಂದಿದೆ.
ವಿನೋದಕುಮಾರ ದಂಪತಿ ಪಟ್ಟಣದ ಅವರ ಬಂಧುಗಳ ಮನೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಮನೆಯ ಮುಂದೆ ನೀರು ಸಂಗ್ರಹಿಸಲು ಹಾಗೂ ನಳ ನೀರು ಹಿಡಿಯಲು ನಿರ್ಮಾಣ ಮಾಡಲಾಗಿದ್ದ ನೀರಿ ತೊಟ್ಟಿಯಲ್ಲಿ ಪೂರ್ಣ ನೀರು ತುಂಬಿದ್ದ ಪರಿಣಾಮ ಪುಟ್ಟ ಬಾಲಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
ಬುಧವಾರ ಬೆಳಗ್ಗೆ ಪುರಸಭೆಯವರು ನೀರು ಬಿಟ್ಟಿದ್ದರು. ಆಗ ಅವರ ಬಂಧುಗಳ ಮನೆಗೆ ಬಂದಿದ್ದ ಪುಟ್ಟ ಬಾಲಕಿ ಹರಿಣಿ ಆಟವಾಡುತ್ತಾ ಬಂದು ಮನೆ ಮುಂದೆ ನೀರು ತುಂಬಿದ್ದ ತೊಟ್ಟಿಯಲ್ಲಿ ಬಿದ್ದಿದ್ದಾಳೆ. ಮಗಳ ಸಾವಿನ ಸುದ್ದಿ ತಿಳಿಯುತ್ತಲೇ ಓಡೋಡಿ ಬಂದ ತಾಯಿಯ ದುಃಖ ಮುಗಿಲು ಮುಟ್ಟಿತ್ತು. ಮಗಳು ಹರಿಣಿಯನ್ನು ಎದೆಗೆ ಅವಚಿಕೊಂಡು ಗೋಳಾಡಿ ಅಳುತ್ತಿರುವುದು ನೆರೆದಿದ್ದ ಜನರ ಕಣ್ಣಂಚಲ್ಲಿ ನೀರನ್ನು ತರಿಸಿತ್ತು.
ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ: ನೀರನ್ನು ಸಂಗ್ರಹಿಸಲು ಹಾಗೂ ನಳದ ಮೂಲಕ ನೀರು ಹಿಡಿಯಲು ಪಟ್ಟಣದ ಬಹುತೇಕರು ತಮ್ಮ ತಮ್ಮ ಮನೆ ಮುಂದೆ ದೊಡ್ಡ ದೊಡ್ಡ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಪುರಸಭೆ 10-15 ದಿನಗಳಿಗೊಮ್ಮೆ ನೀರು ಬಿಡುತ್ತದೆ. ದಿನಂಪ್ರತಿ ನೀರು ಪೂರೈಸುತ್ತಿದ್ದರೆ ಇವತ್ತು ಈ ಘಟನೆ ಸಂಭವಿಸುತ್ತಿರಲಿಲ್ಲ. ಇದು ಪುರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದು ಸ್ಥಳದಲ್ಲಿ ನೆರೆದಿದ್ದ ಜನ ಪುರಸಭೆಯನ್ನು ಶಪಿಸಿದರು. ಪುರಸಭೆಯವರು ಸಮರ್ಪಕವಾಗಿ ನಳ ನೀರು ಬಿಟ್ಟರೆ ಯಾವ ಮನೆ ಮುಂದೆಯೂ ಇಂತಹ ದೊಡ್ಡ ತೊಟ್ಟಿಗಳನ್ನು ನಿರ್ಮಾಣ ಅಗತ್ಯವಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿ ಶೀಲಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement