ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ: ಅರ್ಜಿ ಆಹ್ವಾನ

Lingaraj Badiger
Updated On : 13 Sept 2013, 11:32 am

ಹಗರಿಬೊಮ್ಮನಹಳ್ಳಿ: 2013-14ನೇ ಸಾಲಿನಲ್ಲಿ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿ ಪಿಯುಸಿ ಮತ್ತು ನಂತರದ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ, ಆರ್ಥಿಕವಾಗಿ ಹಿಂದುಳಿದಿರುವ ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸ ಸಬಯಸುವ ವಿದ್ಯಾರ್ಥಿಗಳು ಸ್ಥಳಿಯ ಆರ್ಯವೈಶ್ಯ ಸಂಘಗಳಿಂದ ಅರ್ಜಿ ಪಡೆದು 2012-13ನೇ ಸಾಲಿನಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ, ಈ ವರ್ಷ ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ವ್ಯಾಸಂಗ ದೃಢೀಕರಣ ಪತ್ರ. ಇಲ್ಲವೆ ಶುಲ್ಕ ಪಾವತಿಸಿದ ರಸೀದಿ ಹಾಗೂ ಸ್ಥಳೀಯ ಆರ್ಯವೈಶ್ಯ ಸಂಘದ ಅಧ್ಯಕ್ಷರ ದೃಢೀಕರಣದೊಂದಿಗೆ ಸೆ. 15ರ ಒಳಗಾಗಿ ಡಿ. ಗೋಪಾಲಕೃಷ್ಣ, ಪ್ರಭಾರ ಕಾರ್ಯದರ್ಶಿ ಆರ್ಯವೈಶ್ಯ ಸಂಘ ಟ್ರಸ್ಟ್, ವಾಸವಿ ದೇವಸ್ಥಾನ, ರಾಮನಗರ, ಹಗರಿಬೊಮ್ಮನಹಳ್ಳಿ ಇಲ್ಲಿಗೆ ಅರ್ಜಿಸಲ್ಲಿಸುವಂತೆ ಸಂಘದ ಅಧ್ಯಕ್ಷ ಜಿ. ಲಕ್ಷ್ಮಿಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement