ಬದುಕಲು ಆತ್ಮಸ್ಥೈರ್ಯ ಮುಖ್ಯ: ಸುರೇಶ್
ಬಳ್ಳಾರಿ: ಯಾಂತ್ರಿಕ ಬದುಕಿನಲ್ಲಿ ವ್ಯಕ್ತಿಯ ಮಾನಸಿಕ ಸ್ಥಿತಿ ಏರುಪೇರಾಗುವುದು ಸಹಜ. ಇದಕ್ಕೆ ಆತ್ಮಸ್ಥೈರ್ಯ ಮುಖ್ಯವಾಗಿದೆ. ವೈಜ್ಞಾನಿಕ ಚಿಂತನೆಯಿಂದ ಇದನ್ನು ಸಾಧಿಸಲು ಸಾಧ್ಯ ಎಂದು ಹಾಸನ ಜಿಲ್ಲೆಯ ವ್ಯಕ್ತಿತ್ವ ವಿಕಾಸ ಯೋಗ ಶಿಕ್ಷಣ ಕೇಂದ್ರ ಉಪನ್ಯಾಸಕ ಸುರೇಶ್ ಗುರೂಜಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಗಣದಲ್ಲಿ ಕಾಲೇಜು ಆಡಳಿತ ಏರ್ಪಡಿಸಿದ್ದ ಆಂತರಿಕ ಗುಣಮಟ್ಟ ಭರವಸಾ ಕೋಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಜಿ.ಆರ್. ವೆಂಕಟೇಶಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುರೇಶ್ ಗೂರೂಜಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಮರಿಗಾದಿಲಿಂಗಪ್ಪ, ಶ್ರೀನಿವಾಸ್, ನಂಜುಂಡಯ್ಯ ಮತ್ತಿತರರು ಇದ್ದರು. ಮರಿಲಿಂಗಯ್ಯ, ದೇವರಾಜ್ ಕಾರ್ಯಕ್ರಮ ನಿರ್ವಹಿಸಿದರು.