ಕುರುಗೋಡು: ಗುಡ್ಡ ಪ್ರದೇಶದಲ್ಲಿ ಪರಿಶೀಲನೆ
ಕುರುಗೋಡು: ಜಿಲ್ಲಾ ಪರಿಸರ ಮತ್ತು ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿ ತಂಡ ಇಲ್ಲಿಗೆ ಸಮೀಪದ ವಜ್ರಬಂಡೆ ಬಸಪ್ಪ ದೇವಸ್ಥಾನದ ಗುಡ್ಡ ಪ್ರದೇಶದಲ್ಲಿ ಪರಿಶೀಲಿಸಿದರು.
ಪರಿಸರ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಕಲ್ಲು ಕ್ರಷರ್‌ಗೆ ಸುರಕ್ಷಿತ ವಲಯ ನಿಗದಿಪಡಿಸಿದ ಪ್ರದೇಶದಲ್ಲಿ ನಾನಾ ಐತಿಹಾಸಿಕ ಸ್ಮಾರಕಗಳಿದ್ದು, ಕ್ರಷರ್ ಚಾಲನೆಗೊಂಡರೆ ಇವುಗಳಿಗೆ ಧಕ್ಕೆಯಾಗುತ್ತದೆ ಎಂಬ ತಕರಾರು ಅರ್ಜಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಭೇಟಿ ನೀಡಿದ ಅಧಿಕಾರಿ ತಂಡ ಲಕ್ಷ್ಮೀಪುರ ಗುಡ್ಡ, ವಜ್ರಬಂಡೆ ಬಸವೇಶ್ವರ ದೇವಸ್ಥಾನದ ಪಕ್ಕದ ಗುಡ್ಡ ಹಾಗೂ ಇವೆರಡರ ನಡುವಿನ ಗುಡ್ಡ ಸೇರಿದಂತೆ 3 ಪ್ರದೇಶಗಳ ಪರಿಶೀಲನೆ ನಡೆಸಿತು. ಅಧಿಕಾರಿ ಶಿವಮೂರ್ತಿ ಮಾತನಾಡಿ, ಅಂತಿಮ ತೀರ್ಮಾನಕ್ಕೆ ಪರಿಶೀಲನಾ ವರದಿಯನ್ನು ಡಿಸಿಗೆ ಸಲ್ಲಿಸಲಾಗುವುದು ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮಂಜಪ್ಪ, ಗೋಪಾಲ ಕೃಷ್ಣ ಇದ್ದರು. ಕುರುಗೋಡು ಪರಿಸರ ರಕ್ಷಣಾ ಸಮಿತಿ ಮುಖಂಡ ಎಚ್.ಎಂ. ವಿಶ್ವನಾಥಸ್ವಾಮಿ ಮಾತನಾಡಿದರು. ಸಮಿತಿಯ ಉಮಾಪತಿಗೌಡ, ಎಸ್.ಪಿ. ಮಹ್ಮದ್‌ಖಾನ್, ನಾಗಯ್ಯ ಸ್ವಾಮಿ, ಆರ್. ಸೋಮನಗೌಡ, ಸಿ. ಆನಂದ್ ಇದ್ದರು.