ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೆರವಣಿಗೆಯೊಂದಿಗೆ ಗಣೇಶೋತ್ಸವಕ್ಕೆ ತೆರೆ

Vishwanath S
Updated On : 14 Sept 2013, 11:52 am

ಕೊಟ್ಟೂರು: ಕೊಟ್ಟೂರು ಭಾಗದಲ್ಲಿ ಮರೆಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಬಗೆಯ ಆಯಾಮ ತಂದುಕೊಟ್ಟ ಇಲ್ಲಿನ ಎಪಿಎಂಸಿ ಶ್ರೀ ವಿನಾಯಕ ಉತ್ಸವ ಸಮಿತಿಯವರ ವೈಭವದ ಗಣೇಶೋತ್ಸವ ಶುಕ್ರವಾರ ಮಳೆಯಲ್ಲಿಯೇ ಅದ್ಧೂರಿಯ ಮೆರವಣಿಗೆಯೊಂದಿಗೆ ತೆರೆಕಂಡಿತು.
ಉತ್ಸವ ನಡೆದ 5 ದಿನಗಳುದ್ದಕ್ಕೂ ನಡೆದ ಪಂಡಿತ ಪುಟ್ಟರಾಜ ಗವಾಯಿಗಳವರ ಸಂಗೀತ ಪಾಠಶಾಲಾ ವಿದ್ಯಾರ್ಥಿಗಳ ಸಂಗೀತ ಝೇಂಕಾರ, ಹರಪನಹಳ್ಳಿಯ ಸಮಸ್ತರು ತಂಡದವರ ಕಾಮತ್ ರಚನೆಯ ಬಾಸುಮಕ ನಿರ್ದೇಶನದ ಸಾಕ್ರೇಟೀಸ್ ಮತ್ತು ಆದರ್ಶ ಮಹಿಳಾ ಮಂಡಳಿಯ ಕಲಾವಿದರ ಡಾ. ರಾಜಪ್ಪ ದಳವಾಯಿ ರಚನೆಯ ಗೋಪಾಲ ಕೃಷ್ಣ ನಾಯಿರಿ ನಿರ್ದೇಶನದ ಕುಲಂ ಕುಲಮಲ್ತು ನಾಟಕ ಪ್ರದರ್ಶನ, 3ನೇ ದಿನ ಗಾಯಕ ರವಿ ಮೂರೂರು ಸುಗಮ ಸಂಗೀತ, 4ನೇ ದಿನ ಶಿವಮೊಗ್ಗದ ನಟಂ ಬಾಲ ನಾಟ್ಯ ಸಂಘದ ಕಲಾವಿದರ ಮನಮೋಹಕ ನೃತ್ಯ ಪ್ರದರ್ಶನ ಆಕರ್ಷಿಸಿತು. ಎಪಿಎಂಸಿ ವರ್ತಕರು, ದಲಾಲರು, ಗುಮಾಸ್ತರು ಮತ್ತು ಹಮಾಲ ಸಂಘದವರು ಒಂದೇ ವೇದಿಕೆಯಡಿ ಪ್ರತಿಷ್ಠಾಪಿಸಿದ್ದ 8 ಅಡಿ ಎತ್ತರದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಜರುಗಿತು. ಪಿ.ವಿ. ಗಣೇಶ್, ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ವೀರೇಶ್, ಕಾರ್ಯದರ್ಶಿ ಎಚ್. ಗುರುಬಸವರಾಜ, ಕೊಟ್ರೇಶ್ ಕಾಮಶೆಟ್ಟಿ, ಚಾಪಿ ಚಂದ್ರಪ್ಪ, ಎಚ್. ಚಂದ್ರಯ್ಯ, ಕೆ. ಕೊಟ್ರೇಶ್, ಬಿ. ಪ್ರಕಾಶ್, ಕಾರ್ತೀಕ್, ಗುರುಶಾಂತಪ್ಪ, ವೀರಭದ್ರಪ್ಪ, ಡಿ. ಭುವನೇಶ್ವರ, ಪೋರಜ್ಜ, ಮಂಜುನಾಥ, ವೀರೇಶ, ವಿಜಯಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement