ರಾಜ್ಯಕ್ಕೆ ಮೋಹನ್ ಭಾಗ್ವತ್ ಭೇಟಿ
ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ರಾಜ್ಯದ ಪ್ರವಾಸಕ್ಕಾಗಿ ಆಗಮಿಸಲಿದ್ದು, ಶುಕ್ರವಾರದಿಂದ ಮೂರು ದಿನಗಳ ಕಾಲ ಬಳ್ಳಾರಿಯಲ್ಲಿ ಶಾಖಾ ಕಾರ್ಯದ ವಿಸ್ತಾರ ಹಾಗೂ ಗುಣಾತ್ಮಕ ವೃದ್ಧಿ, ಸೇವಾ ಚಟುವಟಿಕೆಗಳ ಬೆಳವಣಿಗೆ, ಮುಂದಿನ ಕಾರ್ಯಯೋಜನೆ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಆರ್ಎಸ್ಎಸ್ನ ಕರ್ನಾಟಕ ಉತ್ತರ ಪ್ರಾಂತದ ಕಾರ್ಯವಾಹ(ಕಾರ್ಯದರ್ಶಿ) ಅರವಿಂದರಾವ್ ದೇಶಪಾಂಡೆ ತಿಳಿಸಿದರು.