ಹಂಪಿ ನೋಡಲು ಬಂದ ವಿದೇಶಿ ಪ್ರವಾಸಿಗ ಸಾವು
ಬಳ್ಳಾರಿ: ಹಂಪಿ ನೋಡಲೆಂದು ಆಗಮಿಸಿದ್ದ ಮದ್ಯವ್ಯಸನಿಯಾದ ಫ್ರಾನ್ಸ್ ಪ್ರವಾಸಿಗನೊಬ್ಬರು ಲಿವರ್ ತೊಂದರೆಯಿಂದ ಬಳಲುತ್ತಿದ್ದು, ಶುಕ್ರವಾರ ವಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ನಿಧನನಾಗಿದ್ದಾರೆ. ಪ್ಯಾಟ್ರಿಕ್ ಜಿನ್‌ಪೌಲ್ (57) ಮೃತಪಟ್ಟವರು. ಇವರು ಹಂಪಿ ನೋಡಲೆಂದು ಫ್ರಾನ್ಸ್‌ನಿಂದ ಬಂದು, ಹೊಸಪೇಟೆಯಲ್ಲಿ ತಂಗಿದ್ದರು. ಮಾರ್ಚ್‌ನಲ್ಲಿ ಭಾರತಕ್ಕೆ ಬಂದ ಇವರು, ವೀಸಾ ಕಳೆದುಕೊಂಡು ಹೊಸ ವೀಸಾ ಮಾಡಿಸಿಕೊಂಡಿದ್ದರು. ನಂತರ ಫ್ರಾನ್ಸ್‌ಗೆ ತೆರಳಿ, ಮತ್ತೆ ಆ.19ಕ್ಕೆ ಭಾರತಕ್ಕೆ ಆಗಮಿಸಿದ್ದರು. ಮದ್ಯವ್ಯಸನಿಯಾದ ಇವರು ಗುರುವಾರ ರಕ್ತವಾಂತಿ ಮತ್ತು ಭೇದಿ ಮಾಡಿಕೊಂಡಿದ್ದರಿಂದ ಹೊಸಪೇಟೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಗುರುವಾರ ರಾತ್ರಿ ಬಳ್ಳಾರಿ ವಿಮ್ಸ್‌ಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಈ ಕುರಿತು ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ದೇಹವನ್ನು ವಿಮ್ಸ್ ಆಸ್ಪತ್ರೆಯ ಶೈತ್ಯಗಾರದಲ್ಲಿ ಇಡಲಾಗಿದ್ದು, ಅವರ ಸಂಬಂಧಿಕರಿಗೆ ರಾಯಭಾರಿಗಳ ಮೂಲಕ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.