ರಾಜ್ಯಮಟ್ಟದ ಲೇಖನ ಸ್ಪರ್ಧೆ
ಬಳ್ಳಾರಿ: ನಗರದ ಎ.ಎಸ್.ಎಂ. ಟ್ರಸ್ಟ್ನ ಕೃಷ್ಣ ಸನ್ನಿಧಿ (ಹಿರಿಯ ನಾಗರಿಕರ ವಿಶ್ರಾಂತಿಧಾಮ) ಸಂಸ್ಥೆಯು ಹಿರಿಯ ನಾಗರಿಕರಿಗಾಗಿ ರಾಜ್ಯಮಟ್ಟದ ಲೇಖನ ಸ್ಪರ್ಧೆ ಆಯೋಜಿಸಿದೆ.
ವಿಶ್ವ ಹಿರಿಯ ನಾಗರಿಕರ ದಿನ (ಅ.1) ಅಂಗವಾಗಿ ಹಮ್ಮಿಕೊಂಡಿರುವ ಸ್ಪರ್ಧೆಯು-ಪೀಳಿಗೆಯ ಅಂತರಗಳು ಹಾಗೂ ವೃದ್ಧಾಪ್ಯ ಮತ್ತು ಜೀವನ ಸಂತೃಪ್ತಿ ಎಂಬ ಎರಡು ಪ್ರಮುಖ ವಿಷಯ ಹೊಂದಿದ್ದು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಒಂದು ಸಾವಿರ ಪದಗಳಿಗೆ ಮೀರದ ಲೇಖನವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಒಬ್ಬರು ಒಂದೇ ವಿಷಯ ಕುರಿತು ಸ್ಪರ್ಧಿಸುವುದು, ಲೇಖನದ ಭಾಷೆ ಕನ್ನಡ ಇಲ್ಲವೇ ಇಂಗ್ಲಿಷ್ ಆಗಬಹುದು. ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯುವುದು ಕಡ್ಡಾಯ. ಬೆರಳಚ್ಚು ಪ್ರತಿ ಬೇಡ. ಇ-ಮೇಲ್ನಲ್ಲಿ ಕಳುಹಿಸುವುದಾದರೆ ನುಡಿ ತಂತ್ರಾಂಶ ಬಳಕೆ ಕಡ್ಡಾಯ.
ಲೇಖನಗಳನ್ನು ಯಾವುದೇ ಮಾಧ್ಯಮದಲ್ಲಿ ಬಳಸಲು ಸಂಸ್ಥೆಗೆ ಸಂಪೂರ್ಣ ಹಕ್ಕು ಇರುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮ. ಉತ್ತಮ ಲೇಖನಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡುತ್ತಿದ್ದು, ಈ ಲೇಖನಗಳನ್ನು ತ್ರೈಮಾಸಿಕ ಪತ್ರಿಕೆಯಲ್ಲಿ ಸಂದರ್ಭಾನುಸಾರ ಪ್ರಕಟಿಸಲಾಗುತ್ತದೆ. ಲೇಖನವನ್ನು ಸೆ.28ರೊಳಗಾಗಿ ಅಧ್ಯಕ್ಷರು ಕೃಷ್ಣ ಸನ್ನಿಧಿ (ಹಿರಿಯ ನಾಗರಿಕರ ವಿಶ್ರಾಂತಿ ಧಾಮ) ಚೌಧರಿ ಕಾಂಪ್ಲೆಕ್ಸ್ ಎದುರು, ಗೀತಾ ನರ್ಸಿಂಗ್ ಹೋಂ ಬಳಿ, ಕೆ.ಸಿ. ರಸ್ತೆ, ಬಳ್ಳಾರಿ-583101 ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ದೂ: 08392 270777, ಮೊ:98450 14229,9449611319 ಎಂದು ಟ್ರಸ್ಟ್ ಅಧ್ಯಕ್ಷೆ ಡಾ.ಎ. ನಾಗರತ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.