ವಡ್ಡರಗುಂಡಿಗೆ ವ್ಯವಸ್ಥೆ ಕಲ್ಪಿಸಿ: ಅಧಿಕಾರಿಗಳಿಗೆ ಭೀಮಾನಾಯ್ಕ ಸೂಚನೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ವಡ್ಡರಗುಂಡಿ ಪ್ರದೇಶದ ಜನತೆಯನ್ನು ಮಳೆ ನೀರಿನಿಂದ ರಕ್ಷಿಸಲು ಅಗತ್ಯವಿರುವ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸುವಂತೆ ಶಾಸಕ ಎಸ್. ಭೀಮಾನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ಸುರಿದ ಉತ್ತರೆ ಮಳೆಗೆ ಜಲಾವೃತಗೊಂಡಿದ್ದ ಪಟ್ಟಣದ ವಡ್ಡರಗುಂಡಿ ತಗ್ಗು ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಚರಂಡಿ ವ್ಯವಸ್ಥೆ ಕಲ್ಪಿಸಿ ವಡ್ಡರಗುಂಡಿ ಪ್ರದೇಶದಲ್ಲಿ ನೀರು ನಿಲ್ಲದಂತೆ ನಿಗಾವಹಿಸಲಾಗುವುದು ಎಂದರು. ವೈ. ಮಲ್ಲಿಕಾರ್ಜುನ, ಉಪ್ಪಾರ ಬಾಲಪ್ಪ, ಕಡ್ಲಬಾಳು ಗ್ರಾಪಂ ಅಧಕ್ಷೆ ಬಡಲಡಿಕಿ ಮಂಜುಳಾ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ನಾಗರಾಜ ಜನ್ನು, ತಾಪಂ ಇಒ ಕೇಣಿ ಬಸಪ್ಪ, ಎಂಜಿನಿಯರ್ ಪ್ರಭಾಕರ ಶೆಟ್ಟಿ, ಕೃಷ್ಣನಾಯ್ಕ, ತಹಸೀಲ್ದಾರ್ ಇಜಾಜ್‌ಬೇಗ್ ಹಾಜರಿದ್ದರು.
--