ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕರಡಿ ದಾಳಿಗೆ ಮೆಕ್ಕೆಜೋಳ ಬೆಳೆ ನಾಶ

Lingaraj Badiger
Updated On : 18 Sept 2013, 11:32 am

ಕೂಡ್ಲಿಗಿ: ತಾಲೂಕಿನ ಮಾಡ್ಲಾಕನಹಳ್ಳಿ ರೈತ ಕೆ.ತಿಪ್ಪಣ್ಣನವರ ಜಮೀನಿಗೆ ಸೋಮವಾರ ರಾತ್ರಿ ಕರಡಿ ದಾಳಿಯಿಂದ ಮಾಡಿದ್ದರಿಂದ ಒಂದು ಎಕರೆಗೂ ಹೆಚ್ಚು ಮೆಕ್ಕೆಜೋಳ ಬೆಳೆ ನಾಶವಾಗಿದೆ.
ಗುಡೇಕೋಟೆ ಭಾಗದ ಈ ಗ್ರಾಮದ ಸುತ್ತಮುತ್ತ ಸಾಕಷ್ಟು ಕರಡಿಗಳಿವೆ. ರೈತರಿಗೆ ಕಾಡು ಪ್ರಾಣಿಗಳಿಂದ ಹಾನಿಯಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಸುಮಾರು ನಾಲ್ಕು ಎಕರೆಯಷ್ಟು ಮೆಕ್ಕೆಜೋಳದ ಬೆಳೆಯಲ್ಲಿ ಈ ರೀತಿಯ ಸಂಕಷ್ಟ ಎದುರಾದರೆ ನಮ್ಮ ಗತಿ ಏನು ಎಂದು ರೈತ ವೀರೇಶ್ ನೊಂದು ನುಡಿಯುತ್ತಾರೆ.
ಇದಲ್ಲದೇ ಈ ಭಾಗದ ಅನೇಕ ರೈತರದು ಇದೇ ಗೋಳು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಷ್ಟಕ್ಕೊಳಗಾಗುವ ರೈತರಿಗೆ ಕಾಡುಪ್ರಾಣಿಗಳಿಂದ ಹಾನಿಯಾಗುವುದು ಕೂಡ ನಷ್ಟದ ಹೊಡೆತ ಎಂದು ಭಾವಿಸಬೇಕಿದೆ. ಹೀಗಾಗಿ, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಬೇಕಾದರೆ ಶೀಘ್ರವೇ ಗುಡೇಕೋಟೆ ಭಾಗದ ಅರಣ್ಯ ಪ್ರದೇಶದಲ್ಲಿ ಕರಡಿಧಾಮ ನಿರ್ಮಾಣವಾಗಬೇಕು ಎಂದು ರೈತರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement