ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: 8 ಜನರ ಬಂಧನ

Lingaraj Badiger
Updated On : 18 Sept 2013, 11:26 am

ಬಳ್ಳಾರಿ: ಇಲ್ಲಿನ ಡಿಸಿ ನಗರದ ವೇಶ್ಯಾವಾಟಿಕೆಯ ಅಡ್ಡೆ ಮೇಲೆ ದಾಳಿ ಮಾಡಿ ಆರು ಯುವತಿಯರನ್ನು ರಕ್ಷಣೆ ಮಾಡಿ, ಎಂಟು ಜನ ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಡಿಸಿ ನಗರದಲ್ಲಿ ವೇಶ್ಯಾವಾಟಿಕೆ ಇನ್ನೂ ಮುಂದುವರಿದಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮುರುಗಣ್ಣ ಅವರ ನೇತೃತ್ವದಲ್ಲಿ ದಾಳಿ ಮಾಡಿ ಕೋಲ್ಕತಾದ ಇಬ್ಬರು ಯುವತಿಯರು, ಓರ್ವಳು ದೆಹಲಿ, ಮೂವರು ಆಂಧ್ರಪ್ರದೇಶದ ಯುವತಿಯರನ್ನು ರಕ್ಷಣೆ ಮಾಡಿ, ಆರೋಪಿಗಳಾದ ಮೆಹಬೂಬು, ಸಿದ್ದಪ್ಪ, ಸತ್ಯನಾರಾಯಣ, ದುರಗಪ್ಪ, ಸೈಯದ್, ರೀಯಾನ್, ಮಹಿಳೆಯರಾದ ಆಸೀನ್, ದೇವಿ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಸಿಕೇಂದರ್ ತಪ್ಪಿಸಿಕೊಂಡಿದ್ದಾನೆ. ಈ ಕುರಿತು ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಇನ್ಸ್ಪೆಕ್ಟರ್ ಸಲೇಮನ್ ತಹಸೀಲ್ದಾರ್, ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಹೊಸಗೆರಪ್ಪ, ಇತರ ಸಿಬ್ಬಂದಿ ಇದ್ದರು.
ಕೂಡ್ಲಿಗಿ: ಶಂಕಿತ ಡೆಂಘೀಗೆ ಬಾಲಕಿ ಬಲಿ
ಕೂಡ್ಲಿಗಿ: ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಮಾಡ್ಲಾಕನಹಳ್ಳಿ ಭವಾನಿ (5) ಮಂಗಳವಾರ ಬೆಳಗಿನ ಜಾವ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಚಿಕ್ಕಜೋಗಿಹಳ್ಳಿ ಸಮೀಪದ ಮಾಡ್ಲಾಕನಹಳ್ಳಿ ಮಹದೇವಪ್ಪ ಪುತ್ರಿ ಭವಾನಿಗೆ ಏಳೆಂಟು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಚಿಕ್ಕಜೋಗಿಹಳ್ಳಿ, ಜಗಳೂರು, ಚಿತ್ರದುರ್ಗದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣವಾಗದಿದ್ದಾಗ ದಾವಣಗೆರೆಗೆ ಕರೆದೊಯ್ಯಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಬಾಲಕಿ ತಂದೆ ಮಹದೇವಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement